ವಿವಿಧ ಅಪರಾಧ ಕೃತ್ಯಗಳು: ಕಾಸರಗೋಡಿನ ವಿವಿಧೆಡೆಗಳ ಐದು ಮಂದಿ ಮಂಗಳೂರಿನಲ್ಲಿ ಸೆರೆ
ಕಾಸರಗೋಡು: ವಿವಿಧ ಅಪರಾಧ ಕೃತ್ಯಗಳಿಗೆ ಸಂಬAಧಿಸಿ ಮಂಜೇಶ್ವರ ಸಹಿತ ಕಾಸರಗೋಡಿನ ವಿವಿಧ ಭಾಗ ಗಳ ಐದು ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿAದ ಮೂರು ಪಿಸ್ತೂಲು, 6 ಸಜೀವ ಮದ್ದುಗುಂಡುಗಳು, 12.895 ಕಿಲೋ ಗಾಂಜಾ, 3 ಕಾರು ಮೊದಲಾ ದವುಗಳನ್ನು ವಶಪಡಿಸಲಾಗಿದೆ.
ಮಂಗಲ್ಪಾಡಿ ನಿವಾಸಿಯೂ ಪ್ರಸ್ತುತ ಮಲಪ್ಪುರಂ ಕೊಂಡೋಟಿಯಲ್ಲಿ ವಾಸಿಸುವ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ (24)ನನ್ನು ಮಂ ಗಳೂರು ನಗರದಲ್ಲಿ ಸೆರೆಹಿಡಿಯಲಾಗಿದೆ. ಈತನ ಕೈಯಿಂದ 12.895 ಕಿಲೋ ಗಾಂಜಾ ಹಾಗೂ ಅದನ್ನು ಸಾಗಿಸಲು ಬಳಸಿದ ಕಾರನ್ನು ವಶಪಡಿಸಲಾಗಿದೆ. ಅಕ್ರಮ ಬಂದೂಕು ಪ್ರಕರಣ ಸಹಿತ 13 ಪ್ರಕರಣಗಳಲ್ಲಿ ಈತ ಆರೋಪಿ ಯಾಗಿದ್ದಾನೆಂದು ಪೊಲೀಸರು ತಿಳಿಸಿ ದ್ದಾರೆ. ಚಿಟ್ಟಾರಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುನ್ನುಂಗೈ ನಿವಾಸಿಯೂ ಪ್ರಸ್ತುತ ಕಾಞಂಗಾಡ್ನಲ್ಲಿ ವಾಸಿಸುವ ನೌಫಲ್ (38), ಕುರುಡಪದವಿನ ಮನ್ಸೂರ್ (30) ಎಂಬಿವರನ್ನು ಕೊಣಾಜೆ ನಾಟೆಕಲ್ಲಿನಿಂದ ಸೆರೆಹಿಡಿದಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇವರ ಕೈಯಿಂದ 2 ಪಿಸ್ತೂಲುಗಳು, 4 ಮದ್ದುಗುಂಡುಗಳು, 2 ಮೊಬೈಲ್ ಫೋನ್ಗಳು ಹಾಗೂ ಸ್ಕಾರ್ಪಿಯೋ ಕಾರನ್ನು ಪೊಲೀಸರು ವಶಪಡಿಸಿದ್ದಾರೆ. ನೌಫಲ್ 112 ಕಿಲೋ ಗಾಂಜಾ ಸಾಗಾಟ, 700 ಗ್ರಾಂ ಎಂಡಿಎAಎ ವಶ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.
ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೊರತ್ತಣೆ ನಿವಾಸಿಗಳಾದ ಮುಹಮ್ಮದ್ ಅಸ್ಕರ್ (27), ಮುಹಮ್ಮದ್ ಸಾಲಿ (35) ಎಂಬಿವರನ್ನು ತಲಪಾಡಿಯಿಂದ ಸೆರೆಹಿಡಿಯಲಾಗಿದೆ. ಇವರ ಕೈಯಿಂದ 1 ಪಿಸ್ತೂಲು, 2 ಮದ್ದುಗುಂಡುಗಳು, 2 ಮೊಬೈಲ್ ಫೋನ್ಗಳನ್ನು ವಶಪಡಿಸ ಲಾಗಿದೆ. ಈ ಪೈಕಿ ಮುಹಮ್ಮದ್ ಸಾಲಿ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ 10ರಷ್ಟು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳೊಂದಿಗೆ ನಂಟು ಹೊಂದಿರುವ ಇತರ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಯು ತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಸೆರೆಗೀಡಾದ ಆರೋಪಿಗಳ ಪೈಕಿ ಕೆಲವ ರಿಗೆ ನಿಷೇಧಿತ ಪಿಎಫ್ಐ ಸಂಘಟನೆ ಯೊಂದಿಗೆ ನಂಟು ಹೊಂದಿರುವ ಬಗ್ಗೆಯೂ ಮಾಹಿತಿ ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಸೆರೆಗೀಡಾದ ಐದು ಮಂದಿ ಮೂರು ವ್ಯತ್ಯಸ್ಥ ಪ್ರಕರಣಗಳಲ್ಲಿ ಆರೋಪಿಗಳಾಗಿ ದ್ದಾರೆ. ಆದರೆ ಈ ಮೂರು ಪ್ರಕರಣಗಳು ಒಂದಕ್ಕೊAದು ಸಂಬAಧ ಹೊಂದಿವೆಯೆAದೂ ತಿಳಿಸಲಾಗಿದೆ.