ಸೀರೆ ಬೈಕ್‌ನ ಚಕ್ರಕ್ಕೆ ಸಿಲುಕಿ ರಸ್ತೆಗೆ ಬಿದ್ದು ಗಾಯಗೊಂಡ ಗೃಹಿಣಿ ಮೃತ್ಯು
ಕಾಸರಗೋಡು: ಸೀರೆ ಬೈಕ್‌ನ ಚಕ್ರಕ್ಕೆ ಸಿಲುಕಿದ ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಗೃಹಿಣಿ ಮೃತಪಟ್ಟರು.
ಮಧೂರು ಬಳಿಯ ಕಾಂದಲ ಎಂಬಲ್ಲಿನ ಜೋಯ್ ಥೋಮಸ್ ಎಂಬವರ ಪತ್ನಿ ಐರಿನ್ ಡಿ’ಸೋಜಾ (44) ಮೃತಪಟ್ಟ ದುರ್ದೈವಿ. ಮಾರ್ಚ್ ೨ರಂದು ಬೇಳ ದರ್ಭೆತ್ತ ಡ್ಕದಲ್ಲಿ ಅಪಘಾತ ಸಂಭವಿಸಿತ್ತು. ಕುಂಬಳೆ ಶಾಂತಿಪಳ್ಳದಲ್ಲಿರುವ ಸಹೋದರನ ಪುತ್ರನ ತೊಟ್ಟಿಲು ಕಟ್ಟುವ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಸೀರೆ ಬೈಕ್‌ನ ಚಕ್ರಕ್ಕೆ ಸಿಲುಕಿದುದರಿಂದ ಐರಿನ್ ಡಿ’ಸೋಜಾ ರಸ್ತೆಗೆ ಬಿದ್ದು ತಲೆಗೆ ಗಾಯವುಂಟಾ ಗಿತ್ತು. ಇದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ ವೇಳೆ ನಿಧನ ಸಂಭವಿಸಿದೆ.
ಮೃತರು ಪತಿ, ಮಕ್ಕಳಾದ ಶಾನ್ ಜೆರ್ವಿನ್, ಸ್ರಜನ್ ಡಿಯೋನ್, ಸಹೋದರ-ಸಹೋದರಿಯರಾದ ಜೋನ್‌ಕ್ರಾಸ್ತ, ಪೀಟರ್ ಕ್ರಾಸ್ತ, ಸಲಿನ್ ಕ್ರಾಸ್ತ, ಇಗ್ನೇಸ್ ಕ್ರಾಸ್ತಾ, ಕಾರ್ಮಿನ್ ಕ್ರಾಸ್ತ, ನತಾಲಿನ್ ಕ್ರಾಸ್ತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.