ಅಸೌಖ್ಯ ಬಾಧಿಸಿ ಎಎಸ್‌ಐ ನಿಧನ
ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆಯ ಎಎಸ್‌ಐ ಪಳ್ಳಿಕ್ಕೆರೆ ನಿವಾಸಿ ರತೀಶ್ ಪಿ.ಕೆ (44) ಅಸೌಖ್ಯ ನಿಮಿತ್ತ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನಹೊಂದಿದರು.
ಇವರು ಕರುಳು, ಕಿಡ್ನಿ ಅಸೌಖ್ಯ ದಿಂದ ಬಳಲುತ್ತಿದ್ದು ಅವರನ್ನು ಅವ ಯವ ಬದಲಾವಣೆ ಶಸ್ತ್ರಕ್ರಿಯೆಗೆ ಒಳಪಡಿಸಲು ತೀರ್ಮಾನಿಸಲಾಗಿತ್ತು. ಈ ಮಧ್ಯೆ ಹೃದಯಾಘಾತಕ್ಕೊಳ ಗಾಗಿದ್ದು, ತಕ್ಷಣ ತುರ್ತು ಚಿಕಿತ್ಸೆ ನೀಡ ಲಾ ಯಿತಾದರೂ ಫಲಕಾರಿಯಾಗದೆ ನಿಧನಹೊಂದಿದರು. ಕೃಷ್ಣನ್-ಸಾವಿತ್ರಿ ದಂಪತಿಯ ಪುತ್ರನಾಗಿರುವ ಮೃತರು ಪತ್ನಿ ಶ್ರೀಲಕ್ಷ್ಮಿ, ಏಕಪುತ್ರಿ ಧನ್ಯ, ಸಹೋದರಿ ಸರಿತಾ (ಪೊಲೀಸ್ ಸಿಬ್ಬಂದಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.