9 ತಿಂಗಳ ಬಳಿಕ ಸುರಕ್ಷಿತವಾಗಿ ಭೂಮಿಗಿಳಿದ ಸುನಿತಾ ವಿಲಿಯಮ್ಸ್
ಫ್ಲೋರಿಡಾ: ತಾಂತ್ರಿಕ ದೋಷದ ಕಾರಣದಿಂದ ಬಾಹ್ಯಾಕಾಶದಲ್ಲೇ 9 ತಿಂಗಳು ಕಳೆದ ನಾಸಾ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಜಂಟಿಯಾಗಿ ಭೂಮಿಗೆ ಕರೆತಂದಿದೆ. ಸ್ಪೇಸ್-ಎಕ್ಸ್-ಕ್ರೂ ಡ್ಯಾಗನ್ ಕ್ಯಾಪ್ಸುಲ್ ನೌಕೆ ಮೂಲಕ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.
ಭಾರತೀಯ ಕಾಲಮಾನ ಪ್ರಕಾರ ಇಂದು ಮುಂಜಾನೆ 3.27ರ ಸುಮಾರಿಗೆ ಈ ಇಬ್ಬರು ಗಗನ ಯಾತ್ರಿಕರು ಫ್ಲೋರಿಡಾ ಸಮುದ್ರದ ಮೇಲೆ ಲ್ಯಾಂಡ್ ಆಗಿದ್ದಾರೆ. ಬಳಿಕ ನಾಸಾ ವಿಜ್ಞಾನಿಗಳ ತಂಡ ಸಮುದ್ರದಿಂದ ಆ ನೌಕೆಯನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದೆ. ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಬೆಳಿಗ್ಗೆ 10.35ಕ್ಕೆ ಫ್ರೀಡಂ ಡ್ರಾಗನ್ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟಿತ್ತು. ನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ರಷ್ಯಾದ ಗಗನ ಯಾತ್ರಿಕ ಅಲೆಕ್ಸಾಂಡರ್ ಗುರ್ಬ್ ನೋವ್ ಆ ನೌಕೆಯಲ್ಲಿದ್ದರು. ಇಂದು ಮುಂಜಾನೆ 3.27ಕ್ಕೆ ಡ್ರಾಗನ್ ನೌಕೆಯು ಸುರಕ್ಷಿತವಾಗಿ ಮೆಕ್ಸಿಕನ್ ಕೊಲ್ಲಿಯ ಫ್ಲೋರಿಡಾ ಕರಾವಳಿ ಸಮೀಪವಿರುವ ಸಮುದ್ರದಲ್ಲಿ ಲ್ಯಾಂಡ್ ಆಯಿತು. ಬಳಿಕ ಆ ನೌಕೆಯನ್ನು ನಾಸಾ ಸಿಬ್ಬಂದಿಗಳ ತಂಡ ಸಮುದ್ರದಿಂದ ಮೇಲಕ್ಕೆತ್ತಿ ದಡಕ್ಕೆ ತಂದು ಅದರೊಳಗಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಹಾಗೂ ಅವರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಇತರ ಇಬ್ಬರು ಗಗನ ಯಾತ್ರಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಕಳೆದ 9 ತಿಂಗಳಿನಿAದ ಬಾಹ್ಯಾಕಾಶ ವಿಮಾನ ನಿಲ್ದಾಣದಲ್ಲೇ ಉಳಿದುಕೊಂಡಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸುರಕ್ಷಿತ ಆಗಮನವನ್ನು ಅಮೇರಿಕಾ ಮಾತ್ರವಲ್ಲದ ಭಾರತ ಸೇರಿದಂತೆ ಇಡೀ ವಿಶ್ವವೇ ಸಂಭ್ರಮಿಸಿದೆ. ಭಾರತದ ಗುಜರಾತ್ನ ಜುಲಾಸಾನ್ ಗ್ರಾಮದಲ್ಲಿ ಸುನಿತಾ ವಿಲಿಯಮ್ಸ್ರ ಪೂರ್ವಜರ ಮನೆ ಇದ್ದು ಸುನಿತಾ ಭೂಮಿಗೆ ಸುರಕ್ಷಿತವಾಗಿ ಇಳಿಯುತ್ತಿರು ವಂತೆಯೇ ಈ ಹಳ್ಳಿಯ ಜನರು ಪಟಾಕಿ ಸಿಡಿಸಿ ಹಾಗೂ ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು. ಸುನಿತಾ ಸುರಕ್ಷಿತ ವಾಗಿ ಭೂಮಿಗೆ ಮರಳಲು ಭಾರತದ ಹಲವು ದೇವಸ್ಥಾನಗಳಲ್ಲಿ ಹಲವರು ಪ್ರಾರ್ಥನೆ ನಡೆಸಿದ್ದು, ಇದೀಗ ಅದು ಫಲಿಸಿದೆ.
ಗುರುತ್ವಾಕರ್ಷಣ ಬಲವಿಲ್ಲದೆ ಕಳೆದ 9 ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆಯಬೇಕಾಗಿ ಬಂದಿದ್ದ ಈ ಇಬ್ಬರು ಗಗನ ಯಾತ್ರಿಕರು ಭೂಮಿಗೆ ಹಿಂತಿರುಗಿದುದರಿAದ ಭೂಮಿಯ ಮೇಲಿನ ಗುರುತ್ವಾಕರ್ಷಣಕ್ಕೆ ಅವರು ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಅದು ಅವರ ಆರೋಗ್ಯದಲ್ಲಿ ಏರುಪೇರು ಉಂಟುಮಾಡುವ ಸಾಧ್ಯತೆ ಪರಿಗಣಿಸಿ ಆರೋಗ್ಯ ತಜ್ಞರು ಸುನಿತಾ ಮತ್ತು ಬುಚ್ ವಿಲ್ಮೋರ್ರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. 8 ದಿನಗಳ ಅಧ್ಯಯನ ಮಿಶನ್ಗಾಗಿ ಇವರಿಬ್ಬರು ಕಳೆದವರ್ಷ ಜೂನ್ 5ರಂದು ಬೋಯಿಂಗ್ ಸ್ಟಾರ್ ಲೈನರ್ ನೌಕೆ ಮೂಲಕ ಅಂತಾರಾಷ್ಟ್ರೀ ಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಕೊನೆಗೂ ಅವರು ಅಲ್ಲಿಂದ ಸುರಕ್ಷಿತವಾಗಿ ಭುವಿಗೆ ಮರಳಿರುವುದನ್ನು ಇಡೀ ವಿಶ್ವವೇ ಸಂಭ್ರಮಿಸಿದೆ.
ಇದೇ ವೇಳೆ ಭಾರತೀಯ ಮೂಲಕ ಸುನಿತಾ ವಿಲಿಯಮ್ಸ್ರನ್ನು ಪ್ರಧಾನಿ ನರೇಂದ್ರಮೋದಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನವನ್ನು ನೀಡಿದ್ದಾರೆ.