ಬಿಜೆಪಿ ನೇತಾರನನ್ನು ಗುಂಡಿಕ್ಕಿ ಕೊಲೆ: ಆರೋಪಿ ಸೆರೆ
ಮಾದಮಂಗಲಂ: ನಿರ್ಮಾಣ ಹಂತದಲ್ಲಿರುವ ಮನೆಯ ಮಾಲಕ ನಾದ ಬಿಜೆಪಿ ನೇತಾರನನ್ನು ಗುಂಡಿಕ್ಕಿ ಕೊಲೆಗೈದ ಘಟನೆ ನಡೆದಿದೆ.
ಮಾದಮಂಗಲಂ ಪೊನಿಯಂ ಗೋಡು ನಿವಾಸಿ ಗೂಡ್ಸ್ ಆಟೋ ಚಾಲಕ ಹಾಗೂ ಬಿಜೆಪಿ ಮಾದ ಮಂಗಲಂನ ಸ್ಥಳೀಯ ನೇತಾರನಾಗಿರುವ ಕೆ.ಕೆ. ರಾಧಾಕೃಷ್ಣನ್ (51) ಎಂಬವರನ್ನು ಕೊಲೆಗೈಯ್ಯಲಾಗಿದೆ. ನಿನ್ನೆ ರಾತ್ರಿ 7ಗಂಟೆಗೆ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ಪೆರುಂಬಡವು ಅಡ್ಕ ನಿವಾಸಿ ಸಂತೋಷ್ ಎಂಬಾ ತನನ್ನು ಪರಿಯಾರಂ ಪೊಲೀಸರು ಬಂಧಿಸಿದ್ದಾರೆ. ಕಾಡುಹಂದಿಗಳನ್ನು ಗುಂಡಿ ಕ್ಕಲು ಪಂ ಚಾಯತ್ ನೇಮಿ ಸಿರುವ ಶೂಟರ್ಸ್ ತಂಡದ ಸದಸ್ಯನೂ ಆಗಿದ್ದಾನೆ ಬಂಧಿತ ಸಂತೋಷ್. ಕಾಡುಹಂದಿಯನ್ನು ಗುಂಡಿಕ್ಕಲು ಉಪ ಯೋಗಿಸುವ ಬಂದೂಕಿ ನಿಂದಲೇ ರಾಧಾಕೃಷ್ಣರಗೆ ಗುಂಡಿಕ್ಕಲಾ ಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೈಯ್ಯಲ್ಪಟ್ಟ ರಾಧಾ ಕೃಷ್ಣನ್ ಮತ್ತು ಆರೋಪಿ ಸಂತೋಷ್ ನಡುವೆ ಪೂರ್ವ ದ್ವೇಷವಿತ್ತು. ಆ ಬಗ್ಗೆ ಸಂತೋಷ್‌ನ ವಿರುದ್ಧ ರಾಧಾಕೃಷ್ಣನ್ ಈ ಹಿಂದೆ ಪೊಲೀಸರಿಗೂ ದೂರು ನೀಡಿದ್ದರು. ಆದ್ದರಿಂದ ಪೂರ್ವದ್ವೇ ಷವೇ ಕೊಲೆಗೆ ಕಾರಣವಾಗಿರಬಹು ದೆಂದು ಪೊಲೀಸರು ತಿಳಿಸಿದ್ದಾರೆ. ಎದೆಗೆ ಗುಂಡು ತಗಲಿ ರಕದ ಮಡುವಿನಲ್ಲಿದ್ದ ರಾಧಾಕೃಷ್ಣನ್‌ರನ್ನು ಕಂಡ ಇತರರು ತಕ್ಷಣ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗದೆ ರಾಧಾಕೃ ಷ್ಣನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು