ಮಂಗಲ್ಪಾಡಿ ಪಂ. ಕಚೇರಿಯಲ್ಲಿ ನೌಕರರ ಕೊರತೆ: ಮತ್ತೆ ಬೀಗ ಜಡಿದ ಸದಸ್ಯರು

ಉಪ್ಪಳ: ಮಂಗಲ್ಪಾಡಿ ಪಂ ಚಾಯತ್ ಕಚೇರಿಯಲ್ಲಿ ಉದ್ಯೋ ಗಸ್ಥರನ್ನು ನೇಮಕಗೊಳಿಸಬೇಕೆಂದು ಆಗ್ರಹಿಸಿ ಸದಸ್ಯರಿಂದ ಪ್ರತಿಭಟನೆ ಮುಂದುವರಿಯುತ್ತಿದ್ದು, ನಿನ್ನೆ ಕೂಡಾ ಬೀಗ ಜಡಿಯಲಾಗಿದೆ. ಬುಧವಾರ ಪಂಚಾಯತ್ ಬಿಜೆಪಿ ಸದಸ್ಯರು ಬೀಗ ಜಡಿದು ಪ್ರತಿಭಟನೆ ನಡೆಸಿ ದ್ದರು. ಬಳಿಕ ಮೇಲಾಧಿಕಾರಿಗಳು ಗುರುವಾರ ಪರಿಹಾರ ಉಂಟು ಮಾಡುವ ಭರವಸೆಯನ್ನು ನೀಡಲಾದ ಬಳಿಕ ಬೀಗವನ್ನು ತೆರಯಲಾಗಿದೆ. ನಿನ್ನೆ ಮಧ್ಯಾಹ್ನ ಜಿಲ್ಲಾ ಅಸಿಸ್ಟೆಂಟ್ ಡೈರೆಕ್ಟರ್ ತಲುಪಿ ಚಚೆð ನಡೆಸಿದ ರೂ ನೌಕರರ ನೇಮಕಕ್ಕೆ ಯಾವುದೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಾಗದ ಕಾರಣ ಅಧಿಕಾರಿಯನ್ನು ಸಹಿ ತ ನೌಕರನ್ನು ಪಂ ಚಾಯತ್ ಸದಸ್ಯರು ಸೇರಿ ಕಚೇರಿಗೆ ಬೀಗ ಜಡಿದು ದಿಗ್ಬಂಧನ ಗೊಳಿಸಿದ್ದಾರೆ. ಚರ್ಚೆ ಗೆ ತಲುಪಿದ ಅಧಿಕಾರಿ ನೌಕರನ್ನು ನೇಮಿಸುವ ಬಗ್ಗೆ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ ಬಳಿಕ ಬೀಗ ವನ್ನು ತೆರೆಯಲಾಗಿದೆ. ಕಳೆದ ನಾಲ್ಕು ತಿಂಗಳಿAದ ಇಲ್ಲಿ ನೌಕರರ ಕೊರತೆಯಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ಸಹಿತ ವಿವಿಧ ಅಧಿಕಾರಿಗಳಿಗೆ ದೂರನ್ನು ನೀಡಿದರೂ ಕ್ರಮಕ್ಕೆ ಮುಂದಾಗಲಿಲ್ಲವೆAದು, ಇಲ್ಲಿರುವ ನಾಲ್ಕು ನೌಕರರಿಗೆ ಕೆಲಸದ ಬಗ್ಗೆ ಅನುಭವಿಲ್ಲವೆಂದು ಪಂಚಾಯತ್ ಅಧ್ಯಕÉ್ಷ ತಿಳಿಸಿದ್ದಾರೆ.

You cannot copy contents of this page