ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದ ಬಗ್ಗೆ ದೂರು: ನರಹತ್ಯಾ ಯತ್ನ ಪ್ರಕರಣ ದಾಖಲು
ಕಾಸರಗೋಡು: ವಾಹನಕ್ಕೆ ಸರಕು ಹೇರುತ್ತಿದ್ದ ವೇಳೆ ಸಾರಿಗೆ ಅಡಚಣೆ ಸೃಷ್ಟಿಸಲಾಗಿದೆಯೆಂದು ಆರೋಪಿಸಿ ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಕಾಸರಗೋಡು ಪೊಲೀಸರು ಓರ್ವನ ವಿರುದ್ಧ ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿರಿಬಾಗಿಲು ರೆಹ್ಮತ್ ನಗರದ ತಾಯತ್ ವಳಪ್ಪಿನ ಅಬೂಬಕ್ಕರ್ ಸಿದ್ದಿಕ್ (25) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ನಿನ್ನೆ ಮಧ್ಯಾಹ್ನ ಕರಂದಕ್ಕಾಡ್ ಉಮಾ ನರ್ಸಿಂಗ್ ಹೋಂ ರಸ್ತೆಯಲ್ಲಿ ತಾನು ವಾಹನಕ್ಕೆ ಸರಕು ಹೇರುತ್ತಿದ್ದ ವೇಳೆ ರಸ್ತೆಗೆ ಅಡಚಣೆ ಸೃಷ್ಟಿಸಿರುವುದಾಗಿ ಆರೋಪಿಸಿ ಓರ್ವ ತನ್ನ ತಲೆಗೆ ಹೊಡೆದು ಗಾಯಗೊಳಿಸಿ ರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಬೂಬಕ್ಕರ್ ಸಿದ್ದಿಕ್ ಆರೋಪಿಸಿದ್ದಾರೆ.