ವಿಷ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿದ್ದ ವೃದ್ದ ನಿಧನ

ಅಡೂರು: ಇಲ್ಲಿಗೆ ಸಮೀಪದ ಕಾಟಿಪ್ಪಾರ ಪುದುಚ್ಚೇರಿ ನಿವಾಸಿ ಮಾಧವನ್ ನಾಯರ್ (79) ಮನೆಯೊಳಗೆ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದಿದ್ದು, ಇವರನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ನಿನ್ನೆ ಸಂಜೆ ಇವರು ಮನೆಯಲ್ಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕೂಡಲೇ ಚೆರ್ಕಳದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮಾನಸಿಕ ಅಸ್ವಸ್ಥತೆ ವಿಷ ಸೇವಿಸಲು ಕಾರಣವೆಂದು ಹೇಳಲಾಗುತ್ತಿದೆ. ಸಿಪಿಎಂ ಕಾಟಿಪ್ಪಾರ ಬ್ರಾಂಚ್ ಸದಸ್ಯರಾಗಿದ್ದಾರೆ.

ಮೃತರು ಪತ್ನಿ ಮುಂಙತ್ ಸರೋಜಿನಿ, ಮಕ್ಕಳಾದ ಎಂ. ಶ್ರೀಜ, ಎಂ. ರತೀಶ್, ಅಳಿಯ ರಾಜನ್ ಮಾನಡ್ಕ, ಸೊಸೆ ಟಿ.ಪ್ರಿಯ, ಸಹೋದರಿ ಕಮ್ಮಾಡತ್ತು ಅಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page