ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ

ಹೊಸದುರ್ಗ: ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿಯಾಗಿದೆ. ಕಾಞಂಗಾಡ್ ಕೊವ್ವಲ್‌ಪಳ್ಳಿಯ ಹೋಟೆಲ್ ವ್ಯಾಪಾರಿ, ನೀಲೇಶ್ವರ ನಿವಾಸಿಯಾದ ಮುಹಮ್ಮದ್ ನೆಡುಂಕಂಡ ಎಂಬವರ ಕಾರು ಉರಿದು ನಾಶಗೊಂಡಿದೆ.

ನಿನ್ನೆ ಸಂಜೆ ಕಾಞಂಗಾಡ್ ಪೇಟೆಯಿಂದ ಸಾಮಗ್ರಿ ಖರೀದಿಸಿ ಮರಳುತ್ತಿದ್ದಾಗ ಅಲಾಮಿಪಳ್ಳಿಗೆ ತಲು ಪಿದಾಗ ಕಾರಿನಲ್ಲಿ ಬೆಂಕಿ ಕಾಣಿಸಿದೆ.

  ಹೊಗೆ ಹಾಗೂ ದುರ್ನಾತ ಅನುಭವಗೊಂಡ ಹಿನ್ನೆಲೆಯಲ್ಲಿ ಮುಹಮ್ಮದ್ ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಅವರು ಕಾರಿನಿಂದಿಳಿದೊಡನೆ ಕಾರಿಗೆ ಬೆಂಕಿ ಪೂರ್ಣವಾಗಿ ಆರಿಸಿಕೊಂಡಿದೆ. ಕಾಞಂ ಗಾಡ್‌ನಿಂದ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿ ಕೊಂಡಿರುವುದಾಗಿ  ಅಂದಾಜಿಸಲಾಗಿದೆ.

You cannot copy contents of this page