ವೆಂಕಟ್ ಭಟ್ ಎಡನೀರು ಅವರಿಗೆ ಪಂಚ ಭಾಷಾ ಸಾಹಿತ್ಯ ಪ್ರಶಸ್ತಿ

ಎಡನೀರು: ಕಾರ್ಟೂನ್ ಕಲಾವಿದ, ಚುಟುಕು ಸಾಹಿತಿ ವೆಂಕಟ್ ಭಟ್ ಎಡನೀರು  ಇವರು ಕಣ್ಣೂರಿನ ನವಪುರಂ ಮಾತಾತೀತ ದೇವಾಲಯದಿಂದ ನೀಡುವ ಪಂಚಭಾಷಾ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೇ 27ರಂದು ನವಪುರಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿದ್ಯಾಧರ ಕನ್ನಡ ಪ್ರತಿಷ್ಠಾನ ದಾವಣಗೆರೆ ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಸಂಸ್ಮರಣೆ ಅಂಗವಾಗಿ ನೀಡುವ ಕನ್ನಡ ನುಡಿ ತೇರು ಪ್ರಶಸ್ತಿಗೂ ಇವರು ಆಯ್ಕೆಯಾಗಿದ್ದು, ಈ ತಿಂಗಳ 20ರಂದು ದಾವಣಗೆರೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

You cannot copy contents of this page