ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 65 ಲೀಟರ್ ಮದ್ಯ ವಶ: ಇಬ್ಬರ ಸೆರೆ

ಕಾಸರಗೋಡು: ಅನಧಿಕೃತವಾಗಿ ಮಾರಾಟ ನಡೆಸಲು ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ೬೫ ಲೀಟರ್ ವಿದೇಶಿ ಮದ್ಯ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ತಿರುಮೇನಿ ಕೊಕ್ಕಡತ್ ಮಂಟಪ ಎಂಬಲ್ಲಿನ ಎಂ.ವಿ. ಜೋಬಿನ್ಸ್ (38), ಚಿಟ್ಟಾರಿಕಲ್ ಕಾಟಾಂಕವಲ ಕಿಳಕ್ಕೇ ಕುಡಿಯಿಲ್ ಹೌಸ್‌ನ ಕೆ.ಪಿ. ಶಿಬು (48) ಎಂಬವರನ್ನು ಬೇಡಗಂ ಎಸ್‌ಐ ಎಂ. ಅgವಿಂದನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬೇಡಗಂ ಇನ್‌ಸ್ಪೆಕ್ಟರ್  ರಾಜೀವನ್‌ರ ನಿರ್ದೇಶ ಮೇರೆಗೆ ನಿನ್ನೆ ರಾತ್ರಿ 9.30ರ ವೇಳೆ ಬಂದಡ್ಕ ಕೋಳಿಚ್ಚಾಲ್ ರಸ್ತೆಯಲ್ಲ್ಲಿ ಕಾರ್ಯಾಚರಣೆ ನಡೆಸಿ ಮದ್ಯ ವಶಪಡಿಸಲಾಗಿದೆ. ಎgಡು ಚೀಲಗಳಲ್ಲಾಗಿ 130 ಬಾಟ್ಲಿ ಮದ್ಯ ಸಾಗಿಸಲಾಗುತ್ತಿತ್ತು.  ಸೆರೆಗೀಡಾದ ಆರೋಪಿಗಳಿಗೆ ಇಷ್ಟು ಪ್ರಮಾಣದಲ್ಲಿ ಮದ್ಯ ಲಭಿಸಿರುವುದರಲ್ಲಿ ನಿಗೂಢತೆ ಸೃಷ್ಟಿಸಿದೆ. ಈ ಕುರಿತು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page