ತಿರುವನಂತಪುರ: ವಿದೇಶಗಳಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಬಳಿಕ ವಂಚಿಸುವ ನೇಮಕಾತಿ (ರಿಕ್ರೂಟ್ಮೆಂಟ್) ಸಂಸ್ಥೆಗಳನ್ನು ನಿಯಂತ್ರಿಸಲು ಹೊಸ ಕಾನೂನಿಗೆ ರೂಪು ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಸರಕಾರದ ಲೈಸನ್ಸ್ ಇಲ್ಲದೆ ಕೇರಳದಲ್ಲಿ ಸಹಸ್ರಾರು ನೇಮಕಾತಿ ಸಂಸ್ಥೆಗಳು ಕಾರ್ಯವೆಸಗುತ್ತಿರು ವುದಾಗಿ ಪತ್ತೆಹಚ್ಚಲಾಗಿದೆ. ಇದರ ಜತೆಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬಳಿಕ ವಂಚಿಸುವ ದೂರು ಗಳೂ ಇನ್ನೊಂದೆಡೆ ಪ್ರತೀ ವರ್ಷ ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟಲು ಹೊಸ ಕಾನೂನಿಗೆ ರೂಪು ನೀಡಲು ಸರಕಾರ ತೀರ್ಮಾನಿಸಿದೆ. ಇದರಂತೆ ಅನಿವಾಸಿ ಕಲ್ಯಾಣ ಸಂಸ್ಥೆಯಾದ ನೋರ್ಕಾ ರೂಟ್ಸ್ ಹೊಸ ಕಾನೂನಿಗೆ ರೂಪು ನೀಡಲು ಅಗತ್ಯದ ಕ್ರಮ ಆರಂಭಿಸಿದೆ. ಮಾತ್ರವಲ್ಲ ಇದಕ್ಕೆ ಹೊಂದಿಕೊಂಡು ಈ ಶಿಫಾರಸ್ಸನ್ನು ಸರಕಾರಕ್ಕೆ ಸಲ್ಲಿಸಲು ಮುಂದಾಗಿದೆ.