ವಲಸೆ ಕಾರ್ಮಿಕನ ಕೊಲೆ: ಸಂಬಂಧಿಕ ಸೆರೆ

ಕಾಸರಗೋಡು: ನಗರದ ಆನೆಬಾಗಿಲಿನ ಕ್ವಾರ್ಟರ್ಸ್‌ನಲ್ಲಿ  ಪಶ್ಚಿಮ ಬಂಗಾಲ ನಿವಾಸಿ ಹಾಗೂ ವಲಸೆ ಕಾರ್ಮಿಕ ಸುಶಾಂತ್ ರಾಯ್ (28)ನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ನನ್ನು ಪೊಲೀಸರು ಬಂಧಿಸಿದ್ದಾರೆ.

 ಕೊಲೆಗೈಯ್ಯಲ್ಪಟ್ಟ ಸುಶಾಂತ್ ರಾಯ್‌ಯ ಸಂಬಂ ಧಿಕ ಹಾಗೂ ಆತನ ಊರಿನ ವನೇ ಆಗಿರುವ ಸಂಜಿತ್ ರಾಯ್ (30) ಬಂಧಿತ ಆರೋಪಿ. ಕೊಲೆಗೈಯ್ಯ ಲ್ಪಟ್ಟ ಸುಶಾಂತ್ ರಾಯ್ ಓರ್ವ ನಿತ್ಯ ಕುಡುಕನಾಗಿ ಆತನ ಉಪಟಳ ಸಹಿಸಲಾಗದೆ  ಆತನ ಜೊತೆಗೇ ಕೆಲಸಕ್ಕೆ ಬಂದಿದ್ದ ಆರೋಪಿ ಆತನ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದನೆಂದೂ ಅದುವೇ ಸುಶಾಂತ್ ರಾಯ್‌ಯ ಸಾವಿಗೆ ಕಾರಣವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page