ಪರಿಯಾರಂ ಮೆಡಿಕಲ್ ಕಾಲೇಜು ಕಾತ್‌ಲ್ಯಾಬ್‌ನಲ್ಲಿ 12 ವಿದ್ಯಾರ್ಥಿನಿಯರಿಗೆ ದೌರ್ಜನ್ಯ ಯತ್ನ: ಟೆಕ್ನೀಷನ್ ಅಮಾನತು

ಕಣ್ಣೂರು:  ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ 12 ವಿದ್ಯಾರ್ಥಿನಿಯರನ್ನು  ದೌರ್ಜನ್ಯಗೈಯ್ಯಲು ಯತ್ನಿಸಿದ್ದನೆಂಬ ದೂರಿನಂತೆ ಅಧಿಕಾರಿಗಳು ಕ್ರಮ ಆರಂಭಿಸಿದರು. ಕಾತ್‌ಲ್ಯಾಬ್ ಟೆಕ್ನೀಷ್ಯನ್ ವಿಳಂಯಗೋಡ್ ನಿವಾಸಿ ಶ್ರೀಜಿತ್‌ನನ್ನು ತನಿಖಾ ವಿದೇಯಗೊಳಿಸಿ ಅಮಾನತು ಮಾಡಲಾಗಿದೆ. 15 ವರ್ಷದಿಂದ ಕಾತ್‌ಲ್ಯಾಬ್‌ನಲ್ಲಿ ತಾತ್ಕಾಲಿಕ ನೌಕರನಾಗಿ ಈತ ದುಡಿಯುತ್ತಿದ್ದನು. ಕಾತ್‌ಲ್ಯಾಬ್‌ನಲ್ಲಿ ಕಾರ್ಡಿಯಾಕ್ ವಾಸ್ಕುಲರ್ ಟೆಕ್ನೀಷ್ಯನ್ ಕೋರ್ಸ್ ಕಲಿಯುವ 15 ವಿದ್ಯಾರ್ಥಿನಿಯರಲ್ಲಿ 12 ಮಂದಿ ಶ್ರೀಜಿತ್‌ನ ವಿರುದ್ಧ ಮೆಡಿಕಲ್ ಕಾಲೇಜು ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದರು. ಈ ಬಗ್ಗೆ ಡಾಕ್ಟರ್‌ಗಳಾದ ಸವಿತಾ, ಸುಧಾ ಎಂಬಿವರು ತನಿಖೆ ನಡೆಸುತ್ತಿದ್ದ ಮಧ್ಯೆ ಆರೋಪಿತನಾದ ಟೆಕ್ನೀಷ್ಯನ್‌ನನ್ನು ಅಮಾನತುಗೊಳಿಸಲಾಗಿದೆ. ತನಿಖಾ ವರದಿ ಎರಡು ದಿನದೊಳಗೆ ಲಭಿಸಬಹುದೆಂದು ತಿಳಿದು ಬಂದಿದೆ. ಸಮಿತಿ ಇದುವರೆಗೆ ನಡೆಸಿದ ತನಿಖೆಯಲ್ಲಿ ದೂರಿನಲ್ಲಿ ಸತ್ಯಾಂಶವಿದೆ ಎಂದು ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ವರದಿಗೂ ಮುಂಚಿತ ಟೆಕ್ನೀಷ್ಯನ್‌ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

You cannot copy contents of this page