ಸರ್ವೀಸ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಅಪರಿಮಿತ ವೇಗ ಆರೋಪ

ಕುಂಬಳೆ:  ಅಗಲ ಕಿರಿದಾದ ಸರ್ವೀಸ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸ್ಪರ್ಧಾ ಸಂಚಾರ ಹಾಗೂ ಅಪರಿಮಿತ ವೇಗ ದ್ವಿಚಕ್ರ ವಾಹನ ಸೇರಿದಂತೆ ಇತರ ಸಣ್ಣ ವಾಹನ ಪ್ರಯಾಣಿಕರಿಗೆ, ಕಾಲ್ನಡೆ ಸಂಚಾರಿಗಳಿಗೆ ಬೆದರಿಕೆ ಸೃಷ್ಟಿಸುತ್ತಿದೆಯೆಂದು ದೂರಲಾಗಿದೆ.

ಕಾಸರಗೋಡು ಕೆಎಸ್‌ಆರ್‌ಟಿಸಿ ಡಿಪೋದಿಂದ ಹೊಸ  ಬಸ್ ನಿಲ್ದಾಣಕ್ಕೆ ತೆರಳದೆ ಸರದಿ ಸಾಲಿನಂತೆ ಮಂಗಳೂರಿಗೆ ಸಮಯಕ್ರಮವನ್ನು ತಪ್ಪಿಸಿ ಬರುವ ಸಾರಿಗೆ ಬಸ್‌ಗಳು ಸರ್ವೀಸ್ ರಸ್ತೆಯಲ್ಲಿ ಅಪರಿಮಿತ ವೇಗದಲ್ಲಿ ಸಂಚರಿಸುತ್ತಿವೆ. ಇದೇ ವೇಳೆ ಇತರ ಬಸ್‌ಗಳನ್ನು  ಹಿಂದಿಕ್ಕಲು ಚರಂಡಿಯ ಸ್ಲ್ಯಾಬ್‌ನ ಮೇಲೂ ಹತ್ತಿ ಸಾಗುತ್ತಿದ್ದು, ಇದು ಬಸ್‌ನ ಪ್ರಯಾಣಿಕರಲ್ಲೂ  ಭೀತಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಸ್ಕೂಟರ್ ಸವಾರ ಕೇರಳ ಮಧ್ಯ ನಿಷೇಧ ಸಮಿತಿ ರಾಜ್ಯ ಯುವಜನ ವಿಭಾಗ ಕೋಶಾಧಿಕಾರಿ ಮಿಶಲ್ ರಹ್ಮಾನ್ ಕುಂಬಳೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

You cannot copy contents of this page