ರಾ.ಹೆದ್ದಾರಿ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣಕ್ಕೆ ಯೂತ್‌ಲೀಗ್ ತಡೆ: ಇಂದು ಸರ್ವಪಕ್ಷ ಸಭೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಯಲ್ಲಿ ಕುಂಬಳೆ ಸೇತುವೆ ಸಮೀಪ ಟೋಲ್ ಬೂತ್ ನಿರ್ಮಾಣ ವಿರುದ್ಧ ನಾಗರಿಕರಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಗತೊಡಗಿದೆ. ಅಸೀಸ್ ಕಳ ತ್ತೂರು, ಎಂ.ಪಿ. ಖಾಲಿದ್ ಎಂಬಿವರ ನೇತೃತ್ವದಲ್ಲಿ ಯೂತ್‌ಲೀಗ್ ಕಾರ್ಯ ಕರ್ತರು ನಿನ್ನೆ ರಾತ್ರಿ ೯ ಗಂಟೆ ವೇಳೆ ತಲುಪಿ ಟೋಲ್ ಬೂತ್ ನಿರ್ಮಾ ಣಕ್ಕೆ ತಡೆಯೊಡ್ಡಿದರು. ಟೋಲ್ ಬೂತ್‌ಗಳ ಮಧ್ಯೆ ೬೦ ಮೀಟರ್ ಅಂತರ ಬೇಕೆಂಬ ನಿಬಂಧನೆಗಳನ್ನು ಉಲ್ಲಂಘಿಸಿ ಕುಂಬಳೆಯಲ್ಲಿ ನಿರ್ಮಾಣ ನಡೆಯುತ್ತಿರುವುದಾಗಿ ಕಾರ್ಯಕರ್ತರು ಆರೋಪಿಸಿದ್ದಾರೆ. ಯಾವುದೇ ಕಾರಣಕ್ಕೂ ಕುಂಬಳೆಯಲ್ಲಿ ಟೋಲ್‌ಬೂತ್ ನಿರ್ಮಿಸಲು ಬಿಡಲಾರೆವೆಂದು ಕಾರ್ಯಕರ್ತರು ತಿಳಿಸಿದ್ದಾರೆ. ವಿಷಯ ತಿಳಿದು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ತಲುಪಿ ಚರ್ಚೆ ನಡೆಸಿದರು. ಇಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್‌ರೊಂದಿಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪೆನಿಯಾದ ಊರಾಲುಂಗಲ್ ಸೊಸೈಟಿ ಚರ್ಚೆ ನಡೆಸುವುದಾಗಿ ನೀಡಿದ ಭರವಸೆ ಬಳಿಕ ಕಾರ್ಯಕರ್ತರು ಪ್ರತಿಭಟನೆ ಕೊನೆಗೊಳಿಸಿದರು.

ಇದೇ ವೇಳೆ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಅಂಗವಾಗಿ ಇಂದು ಕುಂಬಳೆಯಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ  ಕುಂಬಳೆ ಪಂಚಾಯತ್ ಕಾನ್ಫರೆನ್ಸ್ ಹಾಲ್‌ನಲ್ಲಿ ಶಾಸಕ ಎಕೆಎಂ ಅಶ್ರಫ್‌ರ ನೇತೃತ್ವದಲ್ಲಿ ಸಭೆ ನಡೆಯಲಿರುವುದೆಂದು ತಿಳಿಸಲಾಗಿದೆ.

You cannot copy contents of this page