ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದವರಿಗೆ ಐಲದಲ್ಲಿ ನುಡಿನಮನ: ಜಾತಿ ಭೇದವ ಮರೆತು ಹಿಂದೂ ಧರ್ಮದ ಒಗ್ಗಟ್ಟಿಗೆ ಕಟಿಬದ್ಧರಾಗಬೇಕಿದೆ- ಎಡನೀರುಶ್ರೀ

ಉಪ್ಪಳ: ಕಾಶ್ಮೀರ ದೇಶದ ಮುಕುಟ ಮಣೆ. ಅದು ಹಿಂದೂ ರಾಷ್ಟ್ರದ ಮುಕುಟ ಮಣÉಯೂ ಹೌದು. ಕಾಶ್ಮೀರದ  ಪಹಲ್ಗಾಮಿನಲ್ಲಿ ಧರ್ಮ ಕೇಳಿ ಕಗ್ಗೊಲೆ ಮಾಡಿದ ರೀತಿ ಖೇದ ಕರ. ನಮ್ಮ ಮಧ್ಯೆಯೇ ಭಯೋತ್ಪಾದಕರು ಇರಬಹುದು. ಜಾತಿ ಭೇದವ ಮರೆತು ಹಿಂದೂ ಧರ್ಮದ ಒಗ್ಗಟ್ಟಿಗೆ ಕಟಿ ಬದ್ದರಾಗ ಬೇಕಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ನುಡಿದರು. ಉಪ್ಪಳ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಶ್ರೀ ಜಗದ್ಗುರು ಶಂಕರಾ ಚಾರ್ಯ ಮಹಾಸಂಸ್ಥಾನಮ್ ಎಡನೀರು ಮಠ ಹಾಗೂ ಶ್ರೀ ನಿತ್ಯಾ ನಂದ ಯೋಗಾಶ್ರಮ ಕೊಂಡೆವೂರು ಮಠ ಇದರ ಸಂಯುಕ್ತ ಆಶ್ರಯದಲ್ಲಿ  ಮತ್ತು ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಕಾಶ್ಮೀರ ಹುತಾತ್ಮರಿಗೆ ನುಡಿನಮನ ಹಾಗೂ ವಿರಾಟ್ ಹಿಂದೂ ಜಾಗೃತಿ ಸಮಾ ವೇಶದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು. ಚಿನ್ಮಯ ಮಿಶನ್‌ನ ವಿವಿಕ್ತಾನಂದ ಸ್ವಾಮೀಜಿ ಮಾತನಾಡಿ, ಕಾಶ್ಮೀರ ನಮಗೆ ಶಿರವಿದ್ದ ಹಾಗೆ.  ದುಷ್ಟರ ಸಂಹಾರವಾಗುವವರೆಗೆ ತಪಸ್ಸು ಮಾಡಬೇಕು. ವಿರಮಿಸದೆ ಹೋರಾಟ ನಡೆಯಬೇಕು. ಹಿಂದುತ್ವ ಮಾತ್ರ ಧ್ಯೇಯ ವಾಕ್ಯವಾಗಬೇಕು. ಒಗ್ಗಟ್ಟಿನಿಂದ ಹೋರಾಡುವ ಸಂದರ್ಭ ಒದಗಿ ಬಂದಿದೆ ಎಂದರು. ಕೊಂಡೆ ವೂರು ಶ್ರೀ ನಿತ್ಯಾನಂದ ಯೋಗಾ ಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದ ಹಿತಕ್ಕಾಗಿ ಮತ್ತು ಧರ್ಮದ ಹಿತಕ್ಕಾಗಿ ದೇವತೆಗಳು ಪುರಾಣದಲ್ಲಿ ಪ್ರಕಟಗೊಂಡAತೆ ಹಿಂದೂಗಳು ಸದೃಢ ಸಮಾಜಕ್ಕೆ ಎದ್ದೇಳಬೇಕು. ದೇಶದ ಕಾಲು ಮತ್ತು ತಲೆಯನ್ನು ಕಾಪಾಡುವ ಹೊಣೆಗಾರಿಕೆ ನಮಗಿದೆ. ಕೆರೆಯಲ್ಲಿ ರುವ ಮೀನಿಗೆ ನೀರೇ ಆಶ್ರಯ. ಹಿಂದೂಗಳಿಗೆ ಭಾರತವೇ ಆಶ್ರಯ. ಹಿಂದೂಗಳ ಮಾರಣ ಹೋಮಕ್ಕೆ ಬಂದ ಸವಾಲುಗಳನ್ನು ಎದುರಿಸಿ ದೇಶಕ್ಕಾಗಿ ಒಗ್ಗೂಡೋಣ ಎಂದು ನುಡಿದರು.
ರಾಷ್ಟ್ರದ ಸಿಂಹಗಳಿಗೆ ಜನನ ಕೊಡುವ ತಾಯಂದಿರಾಗಬೇಕು. ರಕ್ತ ಸಿಕ್ತ ಭಾರತಕ್ಕೆ ಮುಕ್ತಿ ಸಿಗ ಬೇಕಿದೆ. ಪಹಲ್ಗಾಮ್ ದಾಳಿಯಿಂ ದಾಗಿ ನಮ್ಮ ಆಸುಪಾಸಿನಲ್ಲಿರುವ ಜನರನ್ನು ಅನುಮಾನಾಸ್ಪದವಾಗಿ ನೋಡುವ ಸಂದರ್ಭ ನಮ್ಮ ಮುಂದಿದೆ. ಕೇರಳವನ್ನು ಪಾಕಿಸ್ತಾನ ಮಾಡುವ ಯೋಜನೆಯಲ್ಲಿದೆ ಎಂದು ಜಿಜೇಶ್ ಪಟ್ಟೇರಿ ಮುಖ್ಯ ಭಾಷಣ ಮಾಡಿದರು.
ಕಾಶ್ಮೀರಿ ಹುತಾತ್ಮರಿಗೆ ನುಡಿ ನಮನ ಕಾರ್ಯಕ್ರಮಕ್ಕೆ ಐಲ ಮೈದಾನ ದಲ್ಲಿ  ಅನುಮತಿ ಕೊಡದ ಪೊಲೀಸ್ ಇಲಾಖೆಯ ವಿರುದ್ಧ ಮಾತನಾಡಿ, ಐಲ ಮೈದಾನ  ಬಚಾವೋ ಯೋಜನೆಗೆ ಈ ಸಮಾವೇಶವೇ ಮುಂದಡಿ. ಐಲ ಮೈದಾನವನ್ನು ಉಳಿಸುವ ಮತ್ತು ಮುಂದಕ್ಕೆ ಹಿಂದೂ ಧಾರ್ಮಿಕ ಕೇಂದ್ರವನ್ನು ಬೆಳೆಸುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಐಲ ಮೈದಾನ ಬಚಾವೋ ಆಂದೋಲನಕ್ಕೆ ಇದೇ ಸಮಾವೇಶ ಸಾಕ್ಷಿಯಾಗಬೇಕು. ಐಲ ಮೈದಾನ ಹಿಂದೂ ದೇಗುಲಕ್ಕೆ ಲಬಿsಸುವÀವರೆಗೆ ಹೋರಾಟ ನಡೆಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಅಡ್ಡಂಡ ಕಾರ್ಯಪ್ಪ ನುಡಿದರು.
ಡಾ. ಸದಾಶಿವ ಕೆ  ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ವಿರಾಟ್ ಹಿಂದೂ ಸಮಾವೇಶದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಪ್ರಾಸ್ತವಿಕ ಮಾತುಗಳನ್ನಾ ಡಿದರು. ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ಪದ್ಮಾಮೋಹನ ದಾಸ್ ವಂದಿಸಿದರು. ಭಾರತ ಮಾತೆಗೆ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮ ಚಾಲನೆಗೊಂಡಿತು. ವಂದೇಮಾತರA ಹಾಡನ್ನು ಕಿಶೋರ್ ಪೆರ್ಲ ಹಾಡಿದರು. ಕಮಲಾಕ್ಷ ಐಲ ಮತ್ತು ಶ್ರೀಧರ ಪರಂಕಿಲ ನಿರೂಪಿ ಸಿದರು. ವಿವಿಧ ಸಂಘಟನೆಯ ಮುಖಂಡರು, ಹಿರಿಯರು ಹಾಗೂ ಮಾತೆಯರ ಸಹಿತ ಸಾವಿರಾರು ಮಂದಿ ಪಾಲ್ಗೊಂಡರು.

You cannot copy contents of this page