ವಿ.ಹಿಂ.ಪದಿಂದ ಪೇಟೆ ವೆಂಕಟ್ರಮಣ ದೇವಸ್ಥಾನದಲ್ಲಿ ಪ್ರಾರ್ಥನೆ

ಕಾಸರಗೋಡು: ಭಾರತದ ರಕ್ಷಣೆಗೆ ಹಾಗೂ ದುಷ್ಟ ಶಕ್ತಿಯನ್ನು ನಿಗ್ರಹಿಸಲು, ವೀರ ಯೋಧರಿಗೆ ಹೋರಾಡಲು ಆತ್ಮ ಧೈರ್ಯ ತುಂಬಲು ಹಾಗೂ ಕಾಶ್ಮೀರದ ಘಟನೆಯಲ್ಲಿ ಮಡಿದವರ ಆತ್ಮ ಶಾಂತಿ, ಕುಟುಂಬಕ್ಕೆ ದುಃಖವನ್ನು ಸಹಿಸುವಂತ ಶಕ್ತಿ ತುಂಬಲು ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವಹಿಂದೂ ಪರಿಷತ್ ಕಾಸರಗೋಡು ನಗರ ಘಟಕದ ವತಿಯಿಂದ ವಿಶೇಷ ಪೂಜೆ, ಪ್ರಾರ್ಥನೆ ನಡೆಸಲಾಯಿತು. ನಗರಸಭೆ ಸದಸ್ಯೆ ಶ್ರೀಲತಾ ಟೀಚರ್, ವಿ.ಎಚ್.ಪಿ. ನಗರ ಘಟಕ ಗೌರವಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಗಣೇಶ್ ಬೀರಂತಬೈಲ್, ಕಾರ್ಯದರ್ಶಿ ಕಿಶೋರ್ ಕುಮಾರ್, ವಸಂತ್ ಕೆರೆಮನೆ ಭಾಗವಹಿಸಿದರು.

RELATED NEWS

You cannot copy contents of this page