ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಅಷ್ಟಬಂಧ  ಬ್ರಹ್ಮಕಲಶೋತ್ಸವ ಇಂದು ಸಮಾಪ್ತಿ

ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಇಂದು ಸಮಾಪ್ತಿಗೊಳ್ಳಲಿದೆ. ಕೀಕಾಂಗೋಡು ನೀಲೇಶ್ವರ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಈ ತಿಂಗಳ 6ರಿಂದ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗುತ್ತಾ ಬಂದಿದೆ.

ನಿನ್ನೆ ಬೆಳಿಗ್ಗೆ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಮಧ್ಯಾಹ್ನ  ಬ್ರಹ್ಮಕಲಶಾಭಿಷೇಕ, ರಾತ್ರಿ ಶ್ರೀರಂಗಪೂಜೆ, ಶ್ರೀಬಲಿ, ಶ್ರೀ ಭೂತಬಲಿ, ಪಲ್ಲಕ್ಕಿ ಉತ್ಸವ, ಚಂದ್ರಮಂಡಲ ರಥೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಮೊದಲಾದ ವೈದಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ, ಯಕ್ಷಗಾನ ಬಯಲಾಟ, ಶಾಸ್ತ್ರೀಯ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಇಂದು ಬೆಳಿಗ್ಗೆ ಉಷಃಪೂಜೆ, ಭಂಡಾರ ಇಳಿಸುವ ಕಾರ್ಯಕ್ರಮದ ಬಳಿಕ ಪಿಲಿಭೂತದ ನೇಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.

You cannot copy contents of this page