ಶಾಂತಿಗುರಿ ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ ಹೊರೆಕಾಣಿಕೆ ಮೆರವಣಿಗೆ ನಾಳೆ
ಉಪ್ಪಳ: ಬೇಕೂರು ಬಳಿಯ ಶಾಂತಿಗುರಿ ಶ್ರೀ ಮೂಕಾಂಬಿಕಾ ದೇವ ಸ್ಥಾನದಲ್ಲಿ ಶ್ರೀ ಮೂಕಾಂಬಿಕಾ ದೇ ವಿಯ ಪೀಠಪ್ರತ್ಗ್ರಿಡಿ ಬ್ರಹ್ಮಕಲಶಾಭಿಷೇಕ ಮತ್ತು ಸಪರಿವಾರ ದೈವಗಳ ಪ್ರತ್ಗ್ರಿಡಿ ಕಲಶಾಭಿಷೇಕ ನಾಳೆಯಿಂದ ಈ ತಿಂಗಳ 19ರ ತನಕ ನಡೆಯಲಿದೆ. ಇದರಂಗವಾಗಿ ಹೊರೆಕಾಣಿಕೆ ಮೆರ ವಣಿಗೆ ನಾಳೆ ಅಪರಾಹ್ನ 3 ಗಂಟೆಗೆ ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಿಂದ ಹೊರಡಲಿದೆ. 5.30ರಿಂದ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, 6ರಿಂದ ಉಗ್ರಾಣ ಮುಹೂರ್ತ, 6.30ಕ್ಕೆ ಶಿಲ್ಪಿಗಳಿಂದ ಆಲಯ ಪರಿಗ್ರಹ ಸಹಿತ ವಿವಿಧ ಕಾರ್ಯಕ್ರಮ, ರಾತ್ರಿ 7ರಿಂದ ವಿವಿಧ ತಂಡಗಳಿAದ ಕುಣಿತ ಭಜನೆ, ರಾತ್ರಿ 8ರಿಂದ ಸ್ಥಳೀಯ ಪ್ರತಿಭೆ ಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ.