ಕಲ್ಲಿಕೋಟೆ: ವನ್ಯಮೃಗಗಳನ್ನು ಬೇಟೆಯಾಡಿದ ಸಂಬಂಧ ಎರಡು ಕೇಸುಗಳಲ್ಲಿ ಆರೋಪಿಯಾದ ವ್ಯಕ್ತಿ ಗುಂಡೇಟು ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೋಡಂಜೇರಿ ಪಾತಿಪ್ಪಾರ ಎಂಬಲ್ಲಿಗೆ ಸಮೀಪದ ಕಾಟಿಲೇಡತ್ ಚಂದ್ರನ್ (52) ಮೃತಪಟ್ಟ ವ್ಯಕ್ತಿ. ವನ್ಯಮೃಗಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡಿದ ಪ್ರಕರಣದಲ್ಲಿ ಚಂದ್ರನ್ ವಿರುದ್ಧ ಅರಣ್ಯ ಇಲಾಖೆ ಕೇಸು ದಾಖಲಿಸಿಕೊಂಡಿತ್ತು. ಈ ಮಧ್ಯೆ ಚಂದ್ರನ್ ಮೂರು ದಿನಗಳಿಂದ ನಾಪತ್ತೆಯಾಗಿದ್ದನೆನ್ನಲಾಗಿದೆ. ನಿನ್ನೆ ಸಂಜೆ ೩ ಗಂಟೆ ವೇಳೆ ತೋಡೊಂದರ ಬಳಿ ಚಂದ್ರನ್‌ರ ಮೃತದೇಹ ಪತ್ತೆಯಾಗಿದೆ. ಸಮೀಪದಲ್ಲೇ ಪರವಾನಗಿ ಇಲ್ಲದ ಕೋವಿ ಕೂಡಾ ಪತ್ತೆಯಾಗಿದೆ.