ಮಧೂರು: ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮಧೂರು ಘಟಕದ ಸಭೆ ಮೀಪುಗುರಿ ತರವಾಡಿನಲ್ಲಿ ಜರಗಿತು. ಸಭೆಯಲ್ಲಿ ರತ್ನಾಕರ ಮನ್ನಿಪ್ಪಾಡಿ, ತನಿಯಪ್ಪ ಇವರಿಗೆ ಚಿಕಿತ್ಸಾ ಧನ ಸಹಾಯವನ್ನು ಕಾಳ್ಯಂಗಾಡು ಮೂಕಾಂಬಿಕಾ ಕ್ಷೇತ್ರ ಆಡಳಿತ ಮೊಕ್ತೆಸರ ಅಚ್ಚುತ ಪೂಜಾರಿ ಹಾಗು ಅಂತಾರಾಷ್ತ್ರೀಯ ಕಬ್ಬಡಿ ಪಟು ಜಗದೀಶ ಕುಂಬಳೆ ವಿತರಿಸಿದರು. ಕೇರಳ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಪೊಲೀಸ್ ಆಫಿಸರ್ ಹಾಗಿ ಉದ್ಯೋಗ ದೊರಕಿದ ಭಗವತಿ ನಗರದ ಉಮೇಶ್- ಜಲಜಾಕ್ಷಿ ದಂಪತಿ ಪುತ್ರಿ ಸ್ವಾತಿಯನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಉಮೇಶ್ ಭಗವತಿ ನಗರ ಅಧ್ಯಕ್ಷತೆ ವಹಿಸಿದರು. ಮೈಂದಪ್ಪ ಪೂಜಾರಿ ಗುಡ್ಡೆಮನೆ,ಹರಿದಾಸ್, ಬಿಲ್ಲವ ಸೇವಾ ಸಂಘ ಕಾಸರಗೋಡಿನ ಅಧ್ಯಕ್ಷÀ ರಘು, ತಾರಾನಾಥ ಗಂಗೆ ವಿಠಲ, ನಾರಾಯಣ, ವಿಶಾಲಾಕ್ಷಿ, ಸುರೇಶ, ಗಣೇಶ, ರತಿ ಉಪಸ್ಥಿತರಿದ್ದರು. ಉಮೇಶ ವಿವೇಕಾನಂದ ನಗರ ನಿರೂಪಿಸಿದರು. ರವೀಂದ್ರ ಕೂಡ್ಲು ಸ್ವಾಗತಿಸಿ, ಮೋಹನ ಸುವರ್ಣ ವಂದಿಸಿದರು.
