ವರ್ಕಾಡಿ ಪಂಚಾಯತ್‌ನಲ್ಲಿ ನಾಲ್ಕು ರಸ್ತೆಗಳ ಉದ್ಘಾಟನೆ

ವರ್ಕಾಡಿ: ವರ್ಕಾಡಿ ಪಂಚಾಯತ್‌ನ ನಾಲ್ಕು ರಸ್ತೆಗಳನ್ನು ಸಾರಿಗೆ ಯೋಗ್ಯಗೊಳಿಸಲಾಯಿತು.  ಶಾಸಕರ  ಫಂಡ್ ಉಪಯೋಗಿಸಿ ಅಭಿವೃದ್ಧಿ ಪಡಿಸಿದ ರಸ್ತೆಗಳನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. 

 7ನೇ ವಾರ್ಡ್‌ನ ಬೋಲ್ಮಡಗುರಿ- ತಟ್ಟಾರಬಳಪ್ಪು- ಬಾಳೆಪುಣಿ ರಸ್ತೆ , 10ನೇ ವಾರ್ಡ್ ಬೋರ್ಕಳ -ಲೆಂಕಿರಿಕಾಡ್    ರಸ್ತೆ  , 13ನೇ ವಾರ್ಡ್ ಅಡೆಕಳಕಟ್ಟೆ-ಕೇಂಪಲದೆರೆ ರಸ್ತೆ, ೧೫ನೇ ವಾರ್ಡ್‌ನ  ಮುಟ್ಲಕಳ್ಳಾಜೆ-ಪೊಯ್ಯೆ ರಸ್ತೆಯನ್ನು ಉದ್ಘಾಟಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಸದಸ್ಯರಾದ ಅಬ್ದುಲ್ ಮಜೀದ್ ಬಿ.ಎ, ಉಮ್ಮರ್ ಬೋರ್ಕಳ, ಇಬ್ರಾಹಿಂ, ಮಾಲತಿ ಕೆ, ಬ್ಲೋಕ್ ಪಂ. ಸದಸ್ಯ ಟಿ.ಎಂ. ಮೊಯ್ದೀನ್ ಕುಂಞಿ, ಪಿ.ಬಿ. ಅಬೂಬಕ್ಕರ್, ಮುಹಮ್ಮದ್ ಮಜಾಲ್, ಪುರುಷೋತ್ತಮ, ಆನಂದ, ರಸಾಕ್,ಹಾರಿಸ್, ಕೆ. ಮುಹಮ್ಮದ್, ಪಿ.ಕೆ. ಅಬ್ದುಲ್ ರಹಮಾನ್ ಮದನಿ, ಡಿ. ಬೂಬ,  ಮುಹಮ್ಮದ್, ಕೆ.ಎಂ. ಅಶ್ರಫ್, ಅಬ್ದುಲ್ಲ, ಪಿ.ಬಿ.ಎ. ಕರೀಂ, ಪಿ.ಕೆ. ಮುಹಮ್ಮದ್, ಎ.ಎಂ. ಉಮ್ಮರ್ ಕುಂಞಿ ಮೊದಲಾದವರು ಮಾತನಾಡಿದರು.

You cannot copy contents of this page