aಉದ್ಯೋಗದ ಹೆಸರಲ್ಲಿ ಹಣ ಲಪಟಾವಣೆ : ಸೆಕ್ರೆಟರಿಯೇಟ್ ನೌಕರ ಸೆರೆ

ಪಾಲಕ್ಕಾಡ್: ಉದ್ಯೋಗ ದೊರ ಕಿಸಿ ಕೊಡುವುದಾಗಿ ಭರವಸೆಯೊಡ್ಡಿ ವ್ಯಕ್ತಿಯಿಂದ ಹಣ  ಲಪಟಾಯಿಸಿದ ಸೆಕ್ರೆಟರಿಯೇಟ್‌ನ ತಾತ್ಕಾಲಿಕ ನೌಕರ ಪೊಲೀಸರ ಸೆರೆಗೀಡಾಗಿದ್ದಾನೆ. ಪನಮಣ ನಿವಾಸಿ ಮಹಮ್ಮದಾಲಿ (39) ಎಂಬಾತ ಬಂಧಿತ ವ್ಯಕ್ತಿ. ಪಾಲಪ್ಪುರಂ ನಿವಾಸಿ ಹರಿದಾಸ್ ಎಂಬವರಿಂದ ಅವರ ಮಗಳಿಗೆ ಉದ್ಯೋಗ ದೊರಕಿಸಿಕೊ ಡುವುದಾಗಿ ಭರವಸೆಯೊಡ್ಡಿ ಮುಹಮ್ಮದಾಲಿ 9 ಲಕ್ಷರೂಪಾಯಿ ಪಡೆದು ವಂಚಿಸಿದ್ದಾನೆನ್ನಲಾಗಿದೆ. ಮುಖ್ಯಮಂತ್ರಿಯೊಂದಿಗೆ ಹತ್ತಿರದ ಸಂಬಂಧವಿದೆಯೆಂದೂ, ಅವರಲ್ಲಿ ಮಾತನಾಡಿ ಉದ್ಯೋಗ ದೊರಕಿ ಸುವುದಾಗಿ ಈತ ನಂಬಿಸಿದ್ದಾನೆನ್ನ ಲಾಗಿದೆ. ಬೇರೆ ಯಾರಾದರೂ ಮುಹ ಮ್ಮದಾಲಿಯ ವಂಚನೆಯಲ್ಲಿ ಸಿಲುಕಿ ದ್ದಾರೆಯೇ ಎಂದು ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಈ ವಂಚನೆಯಲ್ಲಿ ಇ ನ್ನೋರ್ವ ಶಾಮೀಲಾಗಿದ್ದಾನೆಂದೂ, ಆತನನ್ನು ಪತ್ತೆಹಚ್ಚಲು ಹುಡುಕಾಟ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page