ಜಿಲ್ಲಾ ಕುಲಾಲ ಸಮುದಾಯ ಭವನದ ಮಿನಿ ಸಭಾಂಗಣ ಉದ್ಘಾಟನೆ, ಮಹಾಸಭೆ ನಾಳೆ
ಮಂಜೇಶ್ವರ:- ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ, ಇದರ ಆಶ್ರಯದಲ್ಲಿ ಜಿಲ್ಲಾ ಕುಲಾಲ ಸುಮುದಾಯ ಭವನದ ನೆಲ ಅಂತಸ್ತಿ ನಲ್ಲಿ ನಿರ್ಮಾಣಗೊಂಡಿರುವ ಮಿನಿ ಸಭಾಂಗಣದ ಉದ್ಘಾಟನೆ, ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಪುಸ್ತಕ ವಿತರಣೆ, ಎಸ್. ಎಸ್. ಎಲ್. ಸಿ ಹಾಗೂ ಪ್ಲಸ್ ಟು /ಪಿ. ಯು. ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ, ಸಹಾಯಹಸ್ತ ವಿತರಣೆ ಮತ್ತು ಸಂಘದ ವಾರ್ಷಿಕ ಮಹಾಸಭೆಯು ನಾಳೆ ಜರಗಲಿದೆ. ಬೆಳಗ್ಗೆ ಗಂಟೆ 8 ರಿಂದ ಗಣಹೋಮ, 8.45 ರಿಂದ ಅಡ್ಕ ಬಂಗೇರ ಮೂಲಸ್ಥಾನ ಭಜನಾ ಮಂಡಳಿ, ಬಾಲಾಂಜನೇಯ ವ್ಯಾಯಾಮ ಶಾಲೆ ಭಜನಾ ತಂಡ, ಶ್ರೀ ಮಹಾಕಾಳಿ ಭಜನಾ ಮಂಡಳಿ ತೂಮಿನಾಡು ತಂಡಗಳಿAದ ಭಜನೆ ಹಾಗೂ ನಂದಗೋಕುಲ ಭಜನಾ ತಂಡ ತೂಮಿನಾಡು ತಂಡದಿAದ ಕುಣಿತ ಭಜನೆ ನಡೆಯಲಿದೆ. 10.30ರಿಂದ ಸಭಾ ಕಾರ್ಯಕ್ರಮ ಆರಂಭÀಗೊಳಲಿದ್ದು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಆಶೀರ್ವಚನ ನೀಡುವರು. ಶಶಿಧರ್ ಕೌಡಿಚಾರು ಅಧ್ಯಕ್ಷತೆ ವಹಿಸುರು. ಪ್ರೇಮಾನಂದ ಕುಲಾಲ್ ಕೋಡಿಕಲ್ ಸಭಾಂಗಣವನ್ನು ಉದ್ಘಾಟಿಸುವರು. ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ವಿಠಲ್ ಕುಲಾಲ್, ದಿವಾಕರ ಮೂಲ್ಯ, ಗಣೇಶ್ ಕುಲಾಲ್, ಅನಿಲ್ ದಾಸ್, ಸಾವಿತ್ರಿ ಮಹಾಬಲ ಹಾಂಡ ಮಂಗಳೂರು, ಕಮ ಲಾಕ್ಷೀ ವಿ ಕುಲಾಲ್, ಜಯಂತಿ ಬದಿಯಡ್ಕ, ರಾಮಚಂದ್ರ ಬಡಾಜೆ, ಚಂದ್ರಶೇಖರ್ ಸಾಲ್ಯಾನ್, ಉಮೇಶ್ ಇಡಿಯಾಲ, ಮಾಲತಿ ಪಿ,ರಾಮ ಅಂಗಡಿಮಾರ್, ಜಯಪ್ರಕಾಶ್ ಕೈರಂಗಳ, ದಾಮೋದರ ಮಾಸ್ಟರ್ ಕಬ್ಬಿನಹಿತ್ಲು ಭಾಗವಹಿಸುವರು.