ಪೈವಳಿಕೆ: ಪೈವಳಿಕೆ ಪಂಚಾಯತ್‌ನಿAದ ಕುಟುಂಬಶ್ರೀ ಜನಕೀಯ ಕ್ಯಾಂಟೀನ್ ನಿರ್ಮಿಸಿ ಒಂದು ವರ್ಷ ಕಳೆದರೂ ಇನ್ನೂ ಕಾಮಗಾರಿ ಪೂರ್ತಿಗೊಳಿಸಿ ಲೋಕಾರ್ಪಣೆಗೊಳಿಸಲು ಪಂಚಾಯತ್ ಅಧಿಕೃತರು ಮುತುವರ್ಜಿವಹಿಸುತ್ತಿಲ್ಲವೆಂದು ಸಾರ್ವಜನಿಕರಿಂದ ವ್ಯಾಪಕ ಅರೋಪಗಳು ಕೇಳಿಬರುತ್ತಿದೆ. ಪಂಚಾಯತ್‌ನ ವನಿತಾ ಫಂಡ್‌ನಿAದ ಸುಮಾರು ೧೨ಲಕ್ಷ ರೂ ವೆಚ್ಚದಲ್ಲಿ ಹೆಂಚು ಹಾಸಿದ ಕ್ಯಾಂಟೀನ್ ನಿರ್ಮಿಸಿ ಒಂದು ವರ್ಷ ಕಳೆದರೂ ಇನ್ನೂ ವಯರಿಂಗ್ ಕೆಲಸ ಬಾಕಿಯಿದೆ. ಅಲ್ಲದೆ ಮಳೆಗೆ ಸೋರುತ್ತಿರುವ ಬಗ್ಗೆಯೂ ಆರೋಪ ಉಂಟಾಗಿದೆ. ಹಲವು ಬಾರಿ ಪಂಚಾಯತ್ üಅಧಿಕಾರಿಗಳÀಲ್ಲಿ ಕ್ಯಾಂಟೀನ್‌ನ ಕಾಮಗಾರಿ ಪೂರ್ತಿ ಗೊಳಿಸಿ ಕಾರ್ಯಾಚರಣೆಗೊಳಿ ಸಬೇಕೆಂದು ತಿಳಿಸಿದರೂ ಪಂಚಾ ಯತ್ ಅಧಿಕಾರಿಗಳÀÄ ಮುತುವರ್ಜಿ ವಹಿಸುತ್ತಿಲ್ಲವೆಂದು ಪಂಚಾಯತ್ ಸಿ.ಡಿ.ಎಸ್ ಘೆÆÃ್ಘಸಿದೆ. ಇಕ್ಕಟ್ಟಾದ ಸ್ಥಳದಲ್ಲಿ ಇದೀಗ ಕ್ಯಾಂಟೀನ್ ಕಾರ್ಯಚರಿಸುತ್ತಿದೆ. ಸರಿಯಾದ ಅಡುಗೆ ಕೋಣೆ ಇಲ್ಲದೆ ಕೆಲಸ ಮಾಡುವ ಕುಟುಂಬಶ್ರೀ ಸದ¸್ಯÉಯರು ಕಷ್ಟ ಪಡುವಂತಾಗಿದೆ. ಇದೀಗ ಕಾರ್ಯಚರಿಸುತ್ತಿರುವ ಕ್ಯಾಂಟೀನ್‌ನಲ್ಲಿ ಒಟ್ಟು ೭ಮಂದಿ ಸದಸ್ಯರಿದ್ದು, ಸ್ಥಳದ ಅಭಾವದಿಂದ ಎಲ್ಲರಿಗೂ ಕೆಲಸ ನಿರ್ವಹಿಸಲು ಅಸಾಧ್ಯವಾಗÀÄತ್ತಿದೆ. ಕೆಲಸ ನಿರ್ವಹಿಸುವ ಸದಸ್ಯರು ಬಡಕುಟುಂಬದವರಾಗಿದ್ದಾರೆ. ನೂತನವಾಗಿ ನಿರ್ಮಿಸಿದ ಕ್ಯಾಂಟೀನ್ ತೆರೆದು ಕಾರ್ಯಾರಂಭಗೊAಡಲ್ಲಿ ಉತ್ತಮ ರೀತಿಯಲ್ಲಿ ವ್ಯಾಪಾರ ಉಂ ಟಾಗಬಹುದೆಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ. ಶೀಘ್ರವೇ ಇದರ ಕಾಮಗಾರಿಯನ್ನು ಪೂರ್ತಿಗೊಳಿಸಿ ಕಾರ್ಯಚರಿಸಲು ಪಂಚಾಯತ್ ಮುಂದಾಗ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
