ರಾಷ್ಟ್ರೀಯ ಹೆದ್ದಾರಿ ಹಾನಿ: ವಿವಿಧ ಪಕ್ಷಗಳಿಂದ ಖಂಡನೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಹಾನಿಗೊಂಡ ಹಿನ್ನೆಲೆಯಲ್ಲಿ ನಿರ್ಮಾಣ ಗುತ್ತಿಗೆ ವಹಿಸಿಕೊಂಡ ಮೇಘ ಇನ್ಫ್ರಾಸ್ಟ್ರೆಕ್ಚರ್‌ನ ಕೆಲಸಗಳನ್ನು ಪುನರ್ ಪರಿಶೀಲಿಸಬೇಕು, ಯೂತ್ ಫ್ರಂಟ್ (ಬಿ) ಜಿಲ್ಲಾ ಸಮಿತಿ ಆಗ್ರಹಿಸಿದೆ. ಜಿಲ್ಲಾಧ್ಯಕ್ಷ ಸಂತೋಷ್ ಮಾವುಂಗಲ್ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು.

ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆ ಬೇಸಿಗೆ ಮಳೆಯಲ್ಲಿಯೇ ನಾಶಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ವೆಲ್ಫೇರ್ ಪಾರ್ಟಿ ಜಿಲ್ಲಾ ಸೆಕ್ರೆಟರಿಯೇಟ್ ಅಭಿಪ್ರಾಯಪಟ್ಟಿದೆ.  ಹೆದ್ದಾರಿ ನಿರ್ಮಾಣದಲ್ಲಿ ಕೇರಳದ ಹವಾಮಾನ ಹಾಗೂ ಪರಿಸರವನ್ನು ಪರಿಗಣಿಸದಿರುವುದು ಈ ದುರಂತಕ್ಕೆ ಕಾರಣವೆಂದು ತಜ್ಞರು ಅಭಿಪ್ರಾಯಪಡುತ್ತಿದ್ದು, ರಾಷ್ಟ್ರೀಯ ಹೆದ್ದಾರಿ  ಅಭಿವೃದ್ಧಿಯ ಕ್ರೆಡಿಟ್ ವಹಿಸಿಕೊಂಡ ರಾಜ್ಯ ಸರಕಾರ ಈ ಅವಸ್ಥೆಯ ಲೋಪವನ್ನು ಸ್ವಯಂ ವಹಿಸಿಕೊಳ್ಳಲು ಸಿದ್ಧವಾಗಬೇಕೆಂದು ಸಭೆ ಆಗ್ರಹಿಸಿದೆ. ಜಿಲ್ಲಾಧ್ಯಕ್ಷ ಟಿ.ಕೆ. ಅಶ್ರಫ್ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು.

You cannot copy contents of this page