ತಿರುವನಂತಪುರ: ಸಿಪಿಎಂನ ಹಿರಿಯ ನೇತಾರನೂ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಇಂದು ೧೦೦ನೇ ಹುಟ್ಟುಹಬ್ಬವನ್ನು ಆಚರಿಸುತ್ತಿ ದ್ದಾರೆ. ತಿರುವನಂತಪುರ ಬಾರ್ಟನ್ ಹಿಲ್ ಲಾ ಕಾಲೇಜು ಸಮೀಪ ಪುತ್ರ ಅರುಣ್ ಕುಮಾರ್ರ ಮನೆಯಲ್ಲಿ ಕಳದ ನಾಲ್ಕು ವರ್ಷಗಳಿಂದ ವಿ.ಎಸ್. ಅಚ್ಯುತಾನಂದನ್ ವಿಶ್ರಾಂತಿಯಲ್ಲಿದ್ದಾರೆ. ವೈದ್ಯರುಗಳ ಕಠಿಣ ನಿರ್ಬಂಧವಿರುವುದರಿಂದ ಹುಟ್ಟುಹಬ್ಬ ಶುಭಾಶಯ ತಿಳಿಸಲು ಹೆಚ್ಚಿನ ಮಂದಿಗೆ ವಿ.ಎಸ್ರನ್ನು ಭೇಟಿ ಯಾಗಲು ಅನುಮತಿ ಯಿಲ್ಲವೆನ್ನ ಲಾಗಿದೆ.
೨೦೧೯ರ ಹುಟ್ಟು ಹಬ್ಬಾಚರಣೆ ಬಳಿಕ ಅಸ್ವಸ್ಥರಾದುದರಿಂದ ವಿ.ಎಸ್. ಪೂರ್ಣ ವಿಶ್ರಾಂತಿಯಲ್ಲಿರುವಂತೆ ವೈದ್ಯರುಗಳು ನಿರ್ದೇಶಿಸಿದ್ದಾರೆ. ಇದರಿಂದ ಅವರು ಕಳೆದ ನಾಲ್ಕು ವರ್ಷಗಳಿಂದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.