ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ : ಚಾಲಕ ಅಪಾಯದಿಂದ ಪಾರು

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿಯಾದ ಘಟನೆ ಇಂದು ಬೆಳಿಗ್ಗೆ ಕುಂಬಳೆಯಲ್ಲಿ ಸಂಭವಿಸಿದೆ.  ಶಿರಿಯಾ ಬತ್ತೇರಿ ಮಹಲ್‌ನ ಮೂಸಾ ಖಲೀಲ್ ಎಂಬವರ ಸ್ವಿಫ್ಟ್ ಕಾರು ಬೆಂಕಿಗಾಹುತಿಯಾ ಗಿದೆ. ಮೂಸಾ ಖಲೀಲ್ ಬಂದ್ಯೋಡು ಭಾಗದಿಂದ ಕುಂಬಳೆ ಪೇಟೆಗೆ ಬರುತ್ತಿದ್ದರು.  ಕುಂಬಳೆ ಪೇಟೆ ಸಮೀಪಕ್ಕೆ ತಲುಪಿದಾಗ ಕಾರಿನ ಮುಂಭಾಗದಿಂದ ಹೊಗೆ ಏಳುತ್ತಿರುವುದು ಕಂಡುಬಂದಿದೆ. ಕೂಡಲೇ ಕಾರನ್ನು ನಿಲ್ಲಿಸಿ ಅವರು ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ.

ಕೆಲವೇ ನಿಮಿಷಗಳೊಳಗೆ  ಕಾರಿಗೆ ಪೂರ್ಣವಾಗಿ ಬೆಂಕಿ ಆವರಿಸಿದೆ.  ವಿಷಯ ತಿಳಿದು  ಸೀನಿಯರ್ ಫಯರ್ ಆಫೀಸರ್ ರಫೀಕ್‌ರ ನೇತೃತ್ವದಲ್ಲಿ ಅಗ್ನಶಾಮಕದಳ ತಲುಪಿ

ಬೆಂಕಿ ನಂದಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರುವುದಾಗಿ ಸಂಶಯಿ ಸಲಾಗುತ್ತಿದೆ. ಜಿಲ್ಲೆಯಲ್ಲಿ ವಾಹನಗಳು ಬೆಂಕಿಗಾಹುತಿ ಯಾಗುವ ಪ್ರಕರಣಗಳು ಪದೇ ಪದೇ ಸಂಭವಿಸುತ್ತಿದೆ. 

ಇಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿ

ಉಪ್ಪಳ: ಚಾರ್ಜ್ ಮಾಡುತ್ತಿದ್ದ ಸ್ಕೂಟರ್ ಆಂಶಿಕವಾಗಿ ಬೆಂಕಿಗಾಹುತಿಯಾದ ಘಟನೆ ಕುಂಜತ್ತೂರಿನಲ್ಲಿ ನಡೆದಿದೆ. ಕುಂಜತ್ತೂರಿನ ಬಶೀರ್ ಎಂಬವರ ಇಲೆಕ್ಟ್ರಿಕ್ ಸ್ಕೂಟರ್‌ನ್ನು ಇಂದು ಮುಂಜಾನೆ   ೫ ಗಂಟೆಗೆ ಚಾರ್ಜ್ ಮಾಡಲೆಂದು ಇರಿಸಲಾಗಿತ್ತು. ಈ ವೇಳೆ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಲಭಿಸಿದ ಮಾಹಿತಿ ಪ್ರಕಾರ ತಕ್ಷಣ ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ಇದರಿಂದ ಹೆಚ್ಚಿನ ನಾಶನಷ್ಟ ತಪ್ಪಿದೆ.

RELATED NEWS

You cannot copy contents of this page