ಪರಿಸರಸ್ನೇಹಿ ಹಸಿರು ಸಂಸ್ಥೆಯಾಗಿ ಪೆರ್ಲ ಕುಟುಂಬ ಆರೋಗ್ಯ ಕೇಂದ್ರ ಆಯ್ಕೆ

ಪೆರ್ಲ: ಅತ್ಯುತ್ತಮ ಪರಿಸರ ಸ್ನೇಹಿ ಹಸಿರು ಸಂಸ್ಥೆಯಾಗಿ ಪೆರ್ಲ ಕುಟುಂಬ ಆರೋಗ್ಯ ಕೇಂದ್ರವನ್ನು ಆಯ್ಕೆ ಮಾಡ ಲಾಗಿದೆ. ನವಕೇರಳ ಕ್ರಿಯಾಯೋಜನೆ ಯಂಗವಾಗಿ ಸ್ವಚ್ಚತಾ ಮಿಷನ್ 2024-25ರ ಪಂಚಾಯತ್ ಮಟ್ಟದ ಪರಿಸರ ಸ್ನೇಹಿ ಸಂಸ್ಥೆಯಾಗಿ ಈ ಕೇಂದ್ರ ಆಯ್ಕೆಯಾಗಿದೆ. ಎಫ್‌ಎಚ್‌ಸಿ ಸಭಾಂಗಣದಲ್ಲಿ ನಡೆದ  ಅಭಿನಂದನಾ ಸಮಾರಂಭದಲ್ಲಿ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂರಿಂದ ಡಾ. ಲಕ್ಷ್ಮಿಪ್ರಿಯ ಈ ಬಗೆಗಿನ ಪ್ರಮಾಣಪತ್ರ, ಬಹುಮಾನ ಸ್ವೀಕರಿಸಿದರು.

ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಅಧ್ಯಕ್ಷತೆ ವಹಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಬಿ ಹನೀಫ್ ಶುಭ ಹಾರೈಸಿದರು. ಹೆಡ್ ಕ್ಲರ್ಕ್ ಲಿಲೇಶ್ ಸ್ವಾಗತಿಸಿ, ಆರೋಗ್ಯ ಅಧಿಕಾರಿ ವಸಂತ ಕುಮಾರ್, ಬಾಬುರಾಜ್ ನೇತೃತ್ವ ವಹಿಸಿದರು.

RELATED NEWS

You cannot copy contents of this page