ಎಬಿವಿಪಿಯ ಅಕ್ಷರ ವಂಡಿಗೆ ಚಾಲನೆ

ಕಾಸರಗೋಡು: ಎಬಿವಿಪಿ ಹಾಗೂ ಸ್ಟೂಡೆಂಟ್ಸ್ ಫಾರ್ ಸೇವ್ (ಎಸ್‌ಎಫ್‌ಎಸ್) ಸಂಯುಕ್ತವಾಗಿ ನಡೆಸುವ  ಅಕ್ಷರ ವಂಡಿ)ಯ ಜಿಲ್ಲಾ ಮಟ್ಟದ ಉದ್ಘಾಟನೆ ಕಾಸರಗೋಡು ನಗರದಲ್ಲಿ ನಡೆಯಿತು. ಎಬಿವಿಪಿ ಜಿಲ್ಲಾ ಕಾರ್ಯದರ್ಶಿ ಶಿವದಾಸ್ ಮಿಯಂಗಾನ ಉದ್ಘಾಟನೆ ನಿರ್ವಹಿ ಸಿದರು. ಜಿಲ್ಲಾಧ್ಯಕ್ಷ ಧೀರಜ್ ಅಣಂಗೂರು, ಕಾಸರಗೋಡು ವಿಭಾಗ ಕನ್ವೀನರ್ ಮನೋಜ್ ಪಾಡಿ ಮೊದಲಾದವರು ಭಾಗವಹಿಸಿದರು. ಅಕ್ಷರ ವಂಡಿ ಎಂಬುವುದು ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವುಳ್ಳ ಕಲಿಕೋಪಕರಣಗಳನ್ನು ವಿತರಿಸುವ ಎಸ್‌ಎಫ್‌ಎಸ್‌ನ ಕಾರ್ಯಕ್ರಮ ವಾಗಿದೆ.  ಈ ಹಂದಿನ ವರ್ಷಗಳಲ್ಲೂ ಬಡವರಾದ ಹಲವು ವಿದ್ಯಾರ್ಥಿಗಳಿಗೆ ಸಹಾಯಕವಾಗುವ ರೀತಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಅಕ್ಷರ ವಂಡಿ ಚಟುವಟಿಕೆ ನಡೆಸಲಾಗಿತ್ತು.

RELATED NEWS

You cannot copy contents of this page