ಮಾದಕವಸ್ತು ವಶ ಓರ್ವ ಸೆರೆ

ಕಾಸರಗೋಡು: ಮುಟ್ಟ ತ್ತೋಡಿ   ಬಾರಿಕ್ಕಾಡು ಕಲ್ಲಕಟ್ಟೆ  ನಿವಾಸಿ ಅನೀಶ್ ಬಿ (36) ಎಂಬಾತನನ್ನು ಮಾದಕ ವಸ್ತುವಾದ 3.49 ಗ್ರಾಂ ಮೆಥಾಫಿಟಾಮಿನ್ ಸಹಿತ ಕಾಸರ ಗೋಡು ಅಬಕಾರಿ ತಂಡ ಬಂಧಿಸಿ ಕೇಸು ದಾಖಲಿಸಿ ಕೊಂಡಿದೆ.

ಕಾಸರಗೋಡು ಎಕ್ಸೈಸ್ ಸ್ಪೆಶಲ್ ಸ್ಕ್ವಾಡ್‌ನ ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶೋ ಬ್ ಕೆ.ಎಸ್ ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಆಫೀ ಸರ್ (ಗ್ರೇಡ್) ಸಿ.ಕೆ.ವಿ ಸುರೇಶ್, ಪ್ರಿವೆಂಟೀವ್ ಆಫೀಸರ್‌ಗಳಾದ ಅಜೀಶ್ ಸಿ, ಪ್ರಜಿತ್ ಕೆ.ಆರ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ  ಶಿಜಿತ್ ವಿ.ವಿ ಮತ್ತು ಚಾಲಕ ಸಜೀಶ್ ಎಂಬಿವರನ್ನೊಳ ಗೊಂಡ ತಂಡ ಈ ಕಾರ್ಯಾ ಚರಣೆ ನಡೆಸಿದೆ. ಬಂಧಿತ ಇತರ ಹಲವು ಅಬಕಾರಿ ಪ್ರಕರಣ ಗಳಲ್ಲಿ ಆರೋಪಿಯಾಗಿ ರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page