ನಾಪತ್ತೆಯಾಗಿದ್ದ ಮಹಿಳೆ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಉಪ್ಪಳ: ನಾಪತ್ತೆಯಾಗಿದ್ದ ಮಹಿಳೆ ತೋಟದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೈವಳಿಕೆ ಕಾಯರ್ಕಟ್ಟೆ ಬಳಿಯ ಮೂಡಂಬಿಕಾನ ನಿವಾಸಿ ದಿ| ಸತ್ಯನಾರಾಯಣ ಭಟ್ರ ಪತ್ನಿ ಶಂಕರಿ ಅಮ್ಮ (74) ಮೃತ ಮಹಿಳೆ. ಮೇ ೩೧ರಂದು ಬೆಳಿಗ್ಗಿನಿಂದ ಇವರು ನಾಪತ್ತೆಯಾಗಿದ್ದರು. ಸಂಬಂಧಿಕರು ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿತ್ತು. ನಿನ್ನೆ ಸಂಬಂಧಿಕರು ಹಾಗೂ ನಾಗರಿಕರು ಹುಡುಕಾಡುತ್ತಿದ್ದಾಗ ಮಧ್ಯಾಹ್ನ ವೇಳೆ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅನಂತರ ಮನೆ ಹಿತ್ತಿಲಲ್ಲಿ ಅಂತ್ಯಸಂಸ್ಕಾರ ನಡೆಸಲಾ ಯಿತು. ಮೃತರು ಸಹೋದರರಾದ ಶ್ರೀನಿವಾಸ ರಾವ್, ಪ್ರಭಾಕರ ರಾವ್, ಸಹೋದರಿ ಜಯಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.