ಏಕದಂತ ಬಳಗ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಪೆರ್ಲ: ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣಗೊಂಡ ಏಕದಂತ ನೃತ್ಯಬಳಗದ ವಿದ್ಯಾರ್ಥಿಗಳಿಗೆ ಏಕದಂತ ಸೇವಾ ಬಳಗ ಪೆರ್ಲ ಇದರ ವತಿಯಿಂದ ಅಭಿನಂದನೆ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮ ಪೆರ್ಲ ಶಾಲೆಯಲ್ಲಿ ನಡೆಯಿತು.

ರಘುರಾಮ್ ಕಾಳ್ಯಂಗಾಡು ದೀಪ ಬೆಳಗಿಸಿ ಉದ್ಘಾಟಿಸಿದರು. ಭಜನಾ ಸಂಕೀರ್ತನಗಾರ ಶಿವರಾಮ್ ಪೆಲ್ತಾಜೆ ಮಾತನಾಡಿದರು. ಡಾ. ಕೃಷ್ಣಮೋಹನ ಪೆರ್ಲ, ರಂಗ ಕಲಾವಿದ ಪುರುಷೋತ್ತಮ ಕೊಡಂಗೆ ಉಪಸ್ಥಿತರಿದ್ದರು. ಏಕದಂತ ಬಳಗದ ನಿರ್ದೇಶಕ ರಮೇಶ್ ಕುರಡ್ಕ ಅಧ್ಯಕ್ಷತೆ ವಹಿಸಿದರು. ಪ್ರಶಾಂತ್ ಕುರಡ್ಕ ಸ್ವಾಗತಿಸಿ, ಶರಣ್ಯ ಸೇರಾಜೆ ವಂದಿಸಿದರು.

RELATED NEWS

You cannot copy contents of this page