20 ಲಕ್ಷ ರೂ. ವ್ಯಯಿಸಿ ನಿರ್ಮಿಸಿದ ವಿಶ್ರಾಂತಿ  ಕೊಠಡಿ, ಶೌಚಾಲಯ ಉಪಯೋಗಶೂನ್ಯ: ಸೀತಾಂಗೋಳಿ ಪೇಟೆಗೆ ಬರುವ ಸಾರ್ವಜನಿಕರಿಗೆ ಸಮಸ್ಯೆ

ಸೀತಾಂಗೋಳಿ: ಸಾರ್ವಜನಿಕ ಬಳಕೆಗಾಗಿ ಸೀತಾಂಗೋಳಿ ಪೇಟೆಯಲ್ಲಿ 20 ಲಕ್ಷರೂಪಾಯಿ ವ್ಯಯಿಸಿ ನಿರ್ಮಿ ಸಿದ ಶೌಚಾಲಯ ಸಹಿತ ವಿಶ್ರಾಂತಿ ಕೊಠಡಿ ಉಪ ಯೋಗವಿಲ್ಲದೆ ಪ್ರದ ರ್ಶನ ವಸ್ತುವಾಗಿ ಉಳಿದುಕೊಂಡಿದೆ.

ಪುತ್ತಿಗೆ ಪಂಚಾಯತ್ ಫಂಡ್ ನಿಂದ ಹಣ ಬಳಸಿ ನಿರ್ಮಿಸಿದ ಈ ಕಟ್ಟಡ ನಿರ್ಮಾಣಗೊಂಡು ಹಲವು ಕಾಲ ಉದ್ಘಾಟನೆಗೊಳ್ಳದೆ ಉಳಿದಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟ ಗೊಂಡ ಬಳಿಕ ಎಚ್ಚೆತ್ತ ಅಧಿಕಾರಿಗಳು ಕಟ್ಟಡ  ಉದ್ಘಾಟಿಸಿದ್ದರು. ಅನಂತರ ಎರಡು ತಿಂಗಳು ಅದು ಕಾರ್ಯಾಚರಿ ಸಿತ್ತು. ಅನಂತರ ಅದು ತೆರೆಯದೆ ಹಾಗೆಯೇ ಉಳಿದುಕೊಂಡಿದೆ.

ಇದೇ ಕಟ್ಟಡದಲ್ಲಿ ಒಂದು  ಅಂಗಡಿ ಕಾರ್ಯಾಚರಿಸುತ್ತಿತ್ತು. ವಿಶ್ರಾಂತಿ ಕೊಠಡಿ ತೆರೆಯದುದರಿಂದ ಅಂಗಡಿಯೂ ಮುಚ್ಚಿಕೊಂಡಿದೆ. ನೀರಿಲ್ಲದಿರುವುದೇ ವಿಶ್ರಾಂತಿ ಕೊಠಡಿ, ಶೌಚಾಲಯ ತೆರೆಯದಿರಲು ಕಾರಣವೆಂದು ಹೇಳಲಾಗುತ್ತಿದೆ. ಇದು ಕಾರ್ಯಾರಂಭಗೊಂಡ ಸಂದರ್ಭದಲ್ಲಿ ಸಮೀಪದ ಮನೆಯೊಂದರಿಂದ ಇಲ್ಲಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಅದು ನಿಲುಗಡೆಗೊಂಡಿರುವುದರಿಂದ ಇಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಇದರಿಂದ ಇದನ್ನು ಮುಚ್ಚುಗಡೆಗೊಳಿಸ ಲಾಗಿದೆ. 20 ಲಕ್ಷ ರೂಪಾಯಿ ವ್ಯಯಿಸಿ ಶೌಚಾಲಯ, ವಿಶ್ರಾಂತಿಕೊಠಡಿ ನಿರ್ಮಿಸುವಾಗ ಸ್ವಂತವಾಗಿ ನೀರಿನ ವ್ಯವಸ್ಥೆ ಏರ್ಪಡಿಸದಿರಲು ಕಾರಣವೇನೆಂದು ನಾಗರಿಕರು  ಪ್ರಶ್ನಿಸುತ್ತಿದ್ದಾರೆ.

ಬದಿಯಡ್ಕ, ಕಾಸರಗೋಡು, ಕುಂಬಳೆ, ಪೆರ್ಲ ಭಾಗದ ಸಾವಿರಾರು ಮಂದಿ ಪ್ರತಿದಿನ ಸೀತಾಂಗೋಳಿ ಪೇಟೆಗೆ ತಲುಪುತ್ತಿದ್ದಾರೆ. ಇಲ್ಲಿನ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯ ತೆರೆದಿರುವುದು ಆರಂಭದಲ್ಲಿ ಪ್ರಯೋಜನಕಾರಿ ಯಾಗಿತ್ತು. ಆದರೆ ಇದೀಗ ಅದು ಮುಚ್ಚಿಕೊಂಡಿರುವುದರಿಂದ ಸಾರ್ವಜನಿಕರು ತೀವ್ರ ಸಮಸ್ಯೆ  ಎದುರಿ ಸಬೇಕಾಗಿದೆ. ಸರಕಾರದಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ವಿಶ್ರಾಂತಿ ಕೊಠಡಿ ಶೌಚಾಲಯ ಉಪಯೋಗ ಶೂನ್ಯವಾಗಿ ಉಳಿದುಕೊಂಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

RELATED NEWS

You cannot copy contents of this page