ಎಕೆಪಿಎ ವೆಸ್ಟ್ ಯೂನಿಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ವೆಸ್ಟ್ ಯೂನಿಟ್ ಇದರ ವತಿಯಿಂದ ವಿಶ್ವ ಪರಿಸರದಿನವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಪರಿಸರದಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು. ಆಸ್ಪತ್ರೆ  ಸುಪರಿಂಟೆಂಡೆಂಟ್ ಡಾ| ಶ್ರೀಕುಮಾರ್ ಮುಕುಂದನ್ ಗಿಡ ನೆಟ್ಟರು. ಯೂನಿಟ್ ಅಧ್ಯಕ್ಷ ವಂತ್ ಕೆರೆಮನೆ, ಎಕೆಪಿಎ ವಲಯ ಕೋಶಾಧಿಕಾರಿ ಮನು, ಯೂನಿಟ್ ನಿರೀಕ್ಷಕ ಶ್ರೀಜಿತ್, ಎಕೆಪಿಎ ಜಿಲ್ಲಾ ಸ್ಪೋರ್ಟ್ಸ್ ಕೋ-ಆರ್ಡಿನೇಟರ್ ರತೀಶ್, ವಲಯ ಸಮಿತಿ ಸದಸ್ಯ ಸುಬ್ರಹ್ಮಣ್ಯ ಎಂ.ಎಸ್, ಮೈಂದಪ್ಪ, ಸಾಂತ್ವನ ಕೋ-ಆರ್ಡಿನೇಟರ್ ಶಾಲಿನಿ ರಾಜೇಂದ್ರನ್, ವಾಸು ಎ, ಸಮಿತಿ ಸದಸ್ಯ ಚಂದ್ರಶೇಖರ ಎಂ, ಆಸ್ಪತ್ರೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಲತಾ ಎಂ, ಶೆಲ್ಜಿ ಮೋಳ್, ರಾಧಾಕೃಷ್ಣನ್, ಸೆಲ್ಮಾ, ಆಸ್ಪತ್ರೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ವಿಶಾಖ್ ಸ್ವಾಗತಿಸಿ, ಕೋಶಾಧಿಕಾರಿ ಗಣೇಶ್ ರೈ ವಂದಿಸಿದರು.

RELATED NEWS

You cannot copy contents of this page