ಮಲೆನಾಡು ಹೆದ್ದಾರಿಯಲ್ಲಿ ಸಂಚರಿಸುವ ಮಹಾಲಕ್ಷ್ಮಿ  ಬಸ್ ಲಾಲ್‌ಭಾಗ್ ವರೆಗೆ ತಲುಪಲು ಆಗ್ರಹ

ಪೈವಳಿಕೆ: ಕಾಸರಗೋಡಿನಿಂದ ವಿದ್ಯಾನಗರ ಮೂಲಕ ಸೀತಾಂಗೋಳಿಯಲ್ಲಾಗಿ ಮಲೆನಾಡು ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಬಸ್ ಲಾಲ್‌ಭಾಗ್‌ವರೆಗೆ ತೆರಳಿ ಮರಳಿ ಮುಡಿಪುಗೆ ಸಂಚರಿಸಬೇಕೆಂದು ಸಿಪಿಎಂ ಆಗ್ರಹಿಸಿದೆ. ಈಗ ಪೈವಳಿಕೆ ಮೂಲಕ ಸಂಚರಿಸುವ ಬಸ್ ಲಾಲ್‌ಬಾಗ್ ವರೆಗೆ ಸಂಚರಿಸಿ ಹಿಂತಿರುಗಿದರೆ ಬಾಯಾರು, ಚಿಪ್ಪಾರು, ಲಾಲ್‌ಭಾಗ್ ಪ್ರದೇಶದ ಜನರಿಗೆ ಉಪಕಾರಪ್ರದವಾಗಬಹುದು. ಈಗ ಈ ಪ್ರದೇಶದ ಜನರು ಈ ಬಸ್‌ನಲ್ಲಿ ಸಂಚರಿಸಲು ಪೈವಳಿಕೆ ವರೆಗೆ ಇತರ ವಾಹನದಲ್ಲಿ ಸಂಚರಿಸಬೇಕಾಗುತ್ತಿದೆ. ಇದು ಸಮಯ ಹಾಗೂ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬಸ್ ಲಾಲ್‌ಭಾಗ್ ವರೆಗೆ ತಲುಪಬೇಕೆಂದು ಚಂದ್ರ ನಾಯ್ಕ್ ಮಾನಿಪ್ಪಾಡಿ ಸಂಬಂಧಪಟ್ಟವರಿಗೆ ಮನವಿ ನೀಡಿದ್ದಾರೆ.

RELATED NEWS

You cannot copy contents of this page