ಮೋದಿ ಅಧಿಕಾರಕ್ಕೇರಿ 11 ವರ್ಷ: ನಮೋ ಫ್ಯಾನ್ಸ್ ಕಾಸರಗೋಡಿನಿಂದ ವಿಶೇಷ ಕಾರ್ತಿಕಪೂಜೆ

ಕಾಸರಗೋಡು: ಮೋದಿ ಫ್ಯಾನ್ಸ್ ಕಾಸರಗೋಡು ಇದರ ಆಶ್ರಯದಲ್ಲಿ  ನರೇಂದ್ರ ಮೋದಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರ ಹೆಸರಲ್ಲಿ ಪ್ರತೀ ತಿಂಗಳು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾರ್ತಿಕಪೂಜೆ ನಡೆಸಲಾಗುತ್ತಿದ್ದು, 11 ವರ್ಷ ತುಂಬಿದ ಈ ತಿಂಗಳ ೯ರಂದು ವಿಶೇಷ ಕಾರ್ತಿಕಪೂಜೆ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರದ ಪ್ರಧಾನ ಅರ್ಚಕ ಶಿವಶಂಕರ ಅಡಿಗ ಪೂಜೆ ನೆರವೇರಿಸಿದರು. ಜಯಶಂಕರ ಅಡಿಗ ಪ್ರಾರ್ಥಿಸಿದರು. ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್, ಕಾರ್ಯದರ್ಶಿ ಸುನಿಲ್ ಪಿ. ಅವರನ್ನು ಗೌರವಿಸಲಾಯಿತು. ನಗರಸಭಾ ಸದಸ್ಯರಾದ ಶ್ರೀಲತಾ ಟೀಚರ್,  ವರಪ್ರಸಾದ್ ಕೋಟೆಕಣಿ, ಪಿ. ರಮೇಶ್, ಬಿಜೆಪಿ ನಗರ ಸಮಿತಿ ಅಧ್ಯಕ್ಷ ಪುರುಷೋತ್ತಮ, ನಮೋ ಫ್ಯಾನ್ಸ್‌ನ ಮುಖಂಡ ಕೆ.ಎನ್. ವೆಂಕಟ್ರಮಣ ಹೊಳ್ಳ, ರಮೇಶ್, ಸತೀಶ್, ಗುಣಪಾಲ ಅಮೈ, ಕಿಶೋರ್ ಕುಮಾರ್, ಕೆ.ಎನ್. ರಾಮಕೃಷ್ಣ ಹೊಳ್ಳ, ರವಿ ಕೇಸರಿ, ಶಂಕರನಾರಾಯಣ ಹೊಳ್ಳ, ನವೀನ್ ಬಟ್ಟಂಪಾರೆ, ತುಕರಾಮ ಆಚಾರ್ಯ ಕೆರೆಮನೆ, ಪ್ರಮೋದ್ ಕುಮಾರ್, ನಾಮದೇವ ಪೈ, ಸೌಮ್ಯ, ಸವಿತ, ಜೀತ, ಜಿತೇಶ್, ಪ್ರೇಮ, ಗೀತ ಹಾಗೂ ಹಲವರು ಉಪಸ್ಥಿತರಿದ್ದರು. ವೆಂಕಟ್ರಮಣ ಬಾಲಗೋಕುಲದ ಮಕ್ಕಳಿಂದ ಭಜನೆ ನಡೆಯಿತು.

RELATED NEWS

You cannot copy contents of this page