ಪತ್ನಿಯನ್ನು ವಿದೇಶಕ್ಕೆ ಕಳುಹಿಸಿ ಹಿಂತಿರುಗುತ್ತಿದ್ದ ಯುವಕ ಅಪಘಾತದಲ್ಲಿ ಮೃತ್ಯು
ತೃಶೂರು: ದುಬಾಯಿಯಿಂದ ರಜೆಯಲ್ಲಿ ಊರಿಗೆ ತಲುಪಿದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ವೆಳಿಯನ್ನೂರು ವಟ್ಟಪ್ಪುಳಕ್ಕಾವ್ ನಿವಾಸಿ ಅರುಣ್ ಗೋಪಿ ಮೃತಪಟ್ಟ ಯುವಕ. ಪತ್ನಿಯನ್ನು ವಿದೇಶಕ್ಕೆ ಕಳುಹಿಸಿದ ಬಳಿಕ ಹಿಂತಿರುಗುವಾಗ ಅಪಘಾತ ಸಂಭವಿಸಿದೆ. ಅರುಣ್ ಗೋಪಿಯ ಬೈಕ್ ನಿಲ್ಲಿಸಿದ್ದ ಮಿನಿ ಲಾರಿಯ ಹಿಂದುಗಡೆಗೆ ಢಿಕ್ಕಿಯಾಗಿದ್ದು, ಸ್ಥಳೀಯರು ಕೂಡಲೇ ಆಸ್ಪತ್ರೆಗೆ ತಲುಪಿ ಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.