ಹತ್ತು ದಿನಗಳ ಹಿಂದೆ ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆ

ಉಪ್ಪಳ: ಹತ್ತು ದಿನಗಳ ಹಿಂದೆ ಕೆಲಸಕ್ಕೆ ತೆರಳಿದ ಮಧ್ಯವಯಸ್ಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಮಂಜೇಶ್ವರ ಬಳಿಯ ಹೊಸಂಗಡಿ ಬೆಜ್ಜದ ಮುಹಮ್ಮದ್(55) ನಾಪತ್ತೆಯಾದ ವ್ಯಕ್ತಿ. ಇವರು ಊರಿನಲ್ಲ್ಲಿ ಬಾವಿ ನಿರ್ಮಾಣ ಸಹಿತ ಕೂಲಿ ಕೆಲಸ ನಿರ್ವಹಿಸುತ್ತಿದ್ದರು. ಎಂದಿನಂತೆ ಹತ್ತು ದಿನಗಳ ಹಿಂದೆ ಕೆಲಸಕ್ಕೆಂದು  ತಿಳಿಸಿ ಮುಹಮ್ಮದ್ ಮನೆಯಿಂದ ತೆರಳಿದ್ದರೆನ್ನಲಾಗಿದೆ. ದಿನಗಳು ಕಳೆದರೂ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಯಿತು. ಅಲ್ಲದೆ ಸಂಬಂಧಿಕರ ಮನೆಗಳಲ್ಲೂ ಹುಡು ಕಾಡಿದರೂ ಪತ್ತೆಹಚ್ಚಲಾಗಲಿಲ್ಲ. ನಾಪತ್ತೆ ಬಗ್ಗೆ ವಾಟ್ಸಪ್‌ನಲ್ಲ್ಲಿ ಪ್ರಚಾರ ಮಾಡಿದರೂ ಪ್ರಯೋಜನವಾಗಿಲ್ಲ. ಮನೆಯೊ ಡೆಯ ದಿಢೀರ್ ನಾಪತ್ತೆಯಾಗಿರುವು ದು ಪತ್ನಿ, ಮಕ್ಕಳಲ್ಲಿ ತೀವ್ರ ಆತಂಕ ಹುಟ್ಟಿಸಿದೆ. ಇವರ ಕುರಿತು ಯಾರಿಗಾದರೂ ಮಾಹಿತಿ ಲಭಿಸಿ ದರೆ ಮಂಜೇಶ್ವರ ಪೊಲೀಸರಿಗೆ ತಿಳಿಸಬೇ ಕೆಂದು ಸಂಬಂಧಿಕರು ವಿನಂತಿಸಿಕೊಂಡಿದ್ದಾರೆ.

RELATED NEWS

You cannot copy contents of this page