ಬೆಂಗಳೂರಿನಿಂದ ಕೇರಳಕ್ಕೆ ಮಾದಕವಸ್ತು ತಲುಪಿಸುತ್ತಿರುವ ಜಾಲದ ಸೂತ್ರಧಾರನ ಸೆರೆ

ಮಂಜೇಶ್ವರ:  ಬೆಂಗಳೂರಿನಿಂದ ಕೇರಳಕ್ಕೆ ಮಾದಕವಸ್ತು ತಲುಪಿಸುತ್ತಿರುವ ಜಾಲದ ಪ್ರಧಾನ ಸೂತ್ರಧಾರನನ್ನು ಪೊಲೀಸರು ಬಂಧಿಸಿದ್ದಾರೆ.

ಕಣ್ಣೂರು ಪಳ್ಳಿಕುನ್ನು ಚಕ್ಕರಪಾರ ನಿವಾಸಿ ಹಂಸ ಮುಸಾಮಿಲ್ (22) ಬಂಧಿತ ಆರೋಪಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಸರಗೋಡು ಡಿವೈಎಸ್ಪಿ ಸುನಿಲ್ ಕುಮಾರ್ ಸಿ.ಕೆ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಅನೂಪ್ ಕುಮಾರ್.ಇ ಎಸ್‌ಐ ರತೀಶ್‌ಗೋಪಿ, ಎಎಸ್‌ಐ ಅತುಲ್‌ರಾಮ್, ಸೀನಿ ಯರ್ ಸಿವಿಲ್ ಪೊಲೀಸ್ ಆಫೀಸರ್ ಧನೇಶ್, ಸಿಪಿಒಗಳಾದ ಸಂದೀಪ್ ಮತ್ತು ಪ್ರಶೋಬ್ ಎಂಬವರನ್ನೊಳ ಗೊಂಡ ಪೊಲೀಸರ ತಂಡ ಕಣ್ಣೂರಿನಿಂದ ಈತನನ್ನು ಬಂಧಿಸಿದೆ.

ಕಳೆದ ಫೆಬ್ರವರಿಯಲ್ಲಿ ಮಂಜೇಶ್ವರ ಪೊಲೀಸರು 75 ಗ್ರಾಂ ಎಂಡಿಎಂಎ ಸಹಿತ ಕೆಲವರನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಎಂಡಿಎಂಎ ತಲುಪಿ ಸಿದ ಆರೋಪದಂತೆ ಹಂಸ ಮುಸಾ ಮಿಲ್‌ನನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈನರ್ ಆಗಿ ದುಡಿಯುತ್ತಿರುವ ಹಂಸ ಅದರ ಮರೆಯಲ್ಲಿ ಭಾರೀ ಪ್ರಮಾಣದಲ್ಲಿ ಮಾದಕದ್ರವ್ಯ ವ್ಯಾಪಾರವನ್ನು ನಡೆಸುತ್ತಿ ದ್ದನು. ಈತನ ನಾಲ್ಕು ಬ್ಯಾಂಕ್ ಖಾತೆಗ ಳನ್ನು ಪರಿಶೀಲಿಸಿದಾಗ ಮಾದಕವಸ್ತು ವ್ಯವಹಾರಕ್ಕಾಗಿ ಪ್ರತೀ ತಿಂಗಳು ಲಕ್ಷಾಂತರ ರೂ.ಗಳನ್ನು ವಿನಿಯೋಗಿ ಸುತ್ತಿದ್ದನೆಂಬು ವುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page