ದತ್ತು ಸ್ವೀಕರಿಸಿದ ಐದರ ಬಾಲಕಿಗೆ ಸಾಕು ತಂದೆಯಿಂದ ಲೈಂಗಿಕ ದೌರ್ಜನ್ಯ

ತಿರುವನಂತಪುರ: ಪಾರಶಾಲದಲ್ಲಿ ದತ್ತು ಸ್ವೀಕರಿಸಿದ 5 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯಗೈದ ತಂದೆ ಸೆರೆಯಾಗಿದ್ದಾನೆ. ಶಿಶು ಕ್ಷೇಮ ಸಮಿತಿಯಿಂದ ದತ್ತು ತೆಗೆದ ಮಗುವಿಗೆ 52ರ ಹರೆಯದ ಸಾಕುತಂದೆ ಲೈಂಗಿಕ ದೌರ್ಜನ್ಯಗೈದಿದ್ದಾನೆ. ಮಗು ತಾಯಿಯಲ್ಲಿ ದೌರ್ಜನ್ಯದ ಬಗ್ಗೆ ತಿಳಿಸಿದ ಹಿನ್ನೆಲೆಯಲ್ಲಿ ಬಾಲಕಿಯನ್ನು ವೈದ್ಯ ತಪಾಸಣೆಗೊಳಪಡಿಸಲಾಗಿದೆ. ಡಾಕ್ಟರ್ ದೌರ್ಜನ್ಯದ ಬಗ್ಗೆ ಖಚಿತಪ ಡಿಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಮಗುವಿನ ಹೇಳಿಕೆ ದಾಖಲಿಸಲಾಗಿದೆ. ಆರೋಪಿಯನ್ನು ನೈಯ್ಯಾಟಿಂಗರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

You cannot copy contents of this page