ನಿರ್ಮಾಣ ಪೂರ್ತಿಗೊಂಡ ಮನೆಯ ಬದಿ ಗುಡ್ಡೆ ಜರಿದು ಗೋಡೆ ಬಿರುಕು: ಅಜಕ್ಕೋಡ್‌ನಲ್ಲಿ ಘಟನೆ

ಎಡನೀರು: ನಿರ್ಮಾಣ ಪೂರ್ತಿ ಗೊಳಿಸಿ ಹೊಸಮನೆಯಲ್ಲಿ ವಾಸ ಮಾಡಬೇಕೆಂಬ ಕನಸಿಗೆ ವಿಧಿ ಗುಡ್ಡೆಯ ರೂಪದಲ್ಲಿ ಮಣ್ಣು ಹಾಕಿದೆ. ಎಡನೀರು ಪಾಡಿ ಅಜಕ್ಕೋಡು ನಿವಾಸಿ ಅಜಿತ್ ಕುಮಾರ್ ನೂತನವಾಗಿ ನಿರ್ಮಿಸುವ ಮನೆಯ ಹಿಂಬದಿಯ ಗುಡ್ಡೆ ಜರಿದು ಹೊಸ ಮನೆಯ ಗೋಡೆ ಬಿರುಕು ಬಿಟ್ಟಿದೆ. ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಪಂಚಾಯತ್‌ನಿಂದ ಲಭಿಸಿದ ಮೊತ್ತದಿಂದ ಮನೆ ನಿರ್ಮಿಸಲಾರಂಭಿ ಸಿದ್ದು, ಕೆಲಸ ಬಹುತೇಕ ಪೂರ್ತಿ ಗೊಂಡಿತ್ತು. ಇನ್ನು ಉಳಿದ ಕೆಲಸಗಳನ್ನು ಮುಗಿಸಲು ಹೆಣ ಗಾಡುತ್ತಿದ್ದ ಮಧ್ಯೆ ಗುಡ್ಡೆ ಕುಸಿದಿದೆ. ಸ್ಥಳಕ್ಕೆ ಪಂಚಾಯತ್ ಸದಸ್ಯ ವೇಣುಗೋಪಾಲ್, ವಿಲ್ಲೇಜ್ ಅಧಿಕಾರಿಗಳು ಬಂದು ಮಾಹಿತಿ ಸಂಗ್ರಹಿಸಿದ್ದಾರೆ.

You cannot copy contents of this page