ಇದು ಮಹತ್ತರ ಸಾಧನೆ: ಗುಜರಿ ಹೆಕ್ಕಿ ಬದುಕು ಕಟ್ಟಿದ ದಂಪತಿಯ ಪುತ್ರಿ ಇನ್ನು ಡಾಕ್ಟರ್

ಕಾಸರಗೋಡು: ತಮಿಳುನಾಡಿನಿಂದ ತಲುಪಿ ಕಾಸರಗೋಡು ಜಿಲ್ಲೆಯವರಾಗಿ ಬದಲಾದ ಮಾರಿಮುತ್ತು ಹಾಗೂ ಮುತ್ತುಕುಮಾರಿ ದಂಪತಿ ಆಗ್ರಹ ಸಫಲಗೊಂಡಿದೆ. ಇನ್ನು ಇವರ ಮಗಳು ಡಾಕ್ಟರ್. ಪಿಲಿಕೋಡು ಮಡಿವಯಲ್‌ನಲ್ಲಿ ಗುಜರಿ ಸಾಮಗ್ರಿಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವಿಸುವ ದಂಪತಿಯ ಪುತ್ರಿ ಅಂಜಲಿಗೆ ಎಂಬಿಬಿಎಸ್ ಪರೀಕ್ಷೆಯಲ್ಲಿ ಪ್ರಜ್ವಲಿಸುವ ಜಯ. ಹೌಸ್ ಸರ್ಜನ್ಸಿ ಪೂರ್ತಿಗೊಳಿಸಿ ಡಾಕ್ಟರ್ ಅಂಜಲಿ 10 ದಿನಗಳೊಳಗೆ ಮನೆಗೆ ತಲುಪುವರು. ಕಳೆದ ವಾರ ಕೊಯಂಬತ್ತೂರಿನಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಆರ್.ಎಸ್. ರಾಜಾ ಕಣ್ಣಪ್ಪನ್ ಪ್ರಮಾಣಪತ್ರ ಈಕೆಗೆ ಹಸ್ತಾಂತರಿಸಿದರು.

ಸೀಮಿತವಾದ ಜೀವಿತ ಸನ್ನಿವೇಶದಲ್ಲಿ ಅಂಜಲಿ ಅಭಿಮಾನಾರ್ಹವಾದ ಸಾಧನೆ ಮಾಡಿದ್ದಾರೆ. ಚೆರುವತ್ತೂರು ಸರಕಾರಿ ವೆಲ್ಫೇರ್ ಯು.ಪಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಬಳಿಕ ಪಿಲಿಕ್ಕೋಡ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಕಲಿತು ಎಲ್ಲಾ ವಿಷಯದಲ್ಲೂ ಎಪ್ಲಸ್ ಗಳಿಸಿ ಬಳಿಕ ಕುಟ್ಟಮತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್‌ಟು ವಿಗೂ ಎಲ್ಲಾ ವಿಷಯದಲ್ಲೂ ಎಪ್ಲಸ್ ಗಳಿಸಿದ್ದರು. ಬಳಿಕ ಕೊಯಂಬತ್ತೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಸೇರಿದ್ದರು. ಚೆರುವತ್ತೂರು ಹಾಗೂ ಪಿಲಿಕ್ಕೋಡ್ ನಿವಾಸಿಗಳಿಗೆ ಪರಿಚಿತರಾದ ಮುತ್ತು ಹಾಗೂ ಮಾರಿಮುತ್ತು ೩೦ ವರ್ಷಗಳ ಹಿಂದೆ ತಮಿಳುನಾಡಿನಿಂದ ಕೆಲಸ ಅರಸಿ ಜಿಲ್ಲೆಗೆ ತಲುಪಿದ್ದರು. ಗುಜರಿ ಹೆಕ್ಕಿ ಬದುಕು ಕಟ್ಟಿದ ಇವರು ಬಳಿಕ ಪಿಲಿಕ್ಕೋಡ್ ಮಡಿವಯಲ್‌ನಲ್ಲಿ ಖಾಯಂ ವಾಸ ಆರಂಭಿಸಿದರು. ಹಿರಿಯ ಪುತ್ರಿ ರೇವತಿ ಎಳಂಬಚ್ಚಿ ಅಂಚೆ ಕಚೇರಿಯಲ್ಲಿ ಪೋಸ್ಟ್ ವುಮೆನ್ ಆಗಿಯೂ, ಪುತ್ರ ಸೂರ್ಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

You cannot copy contents of this page