ತರೂರ್‌ರ ಅಸಮಾಧಾನ: ಪ್ರತಿಕ್ರಿಯಿಸದಿರಲು ಕಾಂಗ್ರೆಸ್ ತೀರ್ಮಾನ

ತಿರುವನಂತಪುರ: ಕಾಂಗ್ರೆಸ್ ನೇತಾರ, ತಿರುವನಂತಪುರ ಸಂಸದ ಶಶಿ ತರೂರ್ ಪಕ್ಷದ ಬಗ್ಗೆ ವ್ಯಕ್ತ ಪಡಿಸಿದ ಅಸಮಾಧಾನ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸ ದಿರಲು ಎಐಸಿಸಿ ನಿರ್ಧರಿಸಿದೆ. ತರೂರ್‌ರನ್ನು ಇನ್ನಷ್ಟು ಅಸಮಾ ಧಾನಪಡಿಸುವಂತಹ ಯಾವುದೇ ಪ್ರತಿಕ್ರಿಯೆ ಪಕ್ಷದಿಂದ ಉಂಟಾಗ ಕೂಡದೆಂದು ತಿಳಿಸಲಾಗಿದೆ. ಇದೇ ವೇಳೆ ತರೂರ್‌ರೊಂದಿಗೆ ನಾಯಕತ್ವ ಚರ್ಚೆ ನಡೆಸಲಿದೆಯೇ ಎಂಬ ಬಗ್ಗೆ ಅನಿಶ್ಚಿತತೆ ಮುಂದುವರಿಸಿದೆ.

ನಿಲಂಬೂರು ಉಪ ಚುನಾವಣೆ ಪ್ರಚಾರಕ್ಕೆ ತನ್ನನ್ನು ಯಾರೂ ಕರೆದಿಲ್ಲ ಂದು ತಿಳಿಸಿದ ತರೂರ್, ಪಕ್ಷದ ನಾಯಕತ್ವದೊಂದಿಗೆ ತನಗೆ ಭಿನ್ನಾಭಿಪ್ರಾಯವಿದೆ ಎಂಬುವುದಾಗಿ ಸೂಚಿಸಿದ್ದರು. ಇದೇ ವೇಳೆ ನಿಲಂಬೂರ್‌ಗೆ ಪ್ರಚಾರಕ್ಕೆ ಕರೆದಿಲ್ಲ ಎಂಬ ತರೂರ್‌ರ ದೂರನ್ನು ಕಾಂಗ್ರೆಸ್ ನಿರಾಕರಿಸಿದೆ.

You cannot copy contents of this page