ವಿಮಾನ ದುರಂತ: ರಂಜಿತಾರ ಮೃತದೇಹ ಊರಿಗೆ

ಪತ್ತನಂತಿಟ್ಟ: ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಪತ್ತನಂತಿಟ್ಟ ನಿವಾಸಿ ರಂಜಿತಾರ ಮೃತದೇಹವನ್ನು ಊರಿಗೆ ತಲುಪಿಸಲಾ ಯಿತು. ಇಂದು ಬೆಳಿಗ್ಗೆ 10 ಗಂಟೆಗೆ ಪತ್ತನಂತಿಟ್ಟಕ್ಕೆ ತಲುಪಿಸಿದ ಮೃತದೇಹ ವನ್ನು ಪುಲ್ಲಾಡ್ ಶ್ರೀ ವಿವೇಕಾನಂದ ಪ್ರೌಢಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಯಿತು. ಸಂಜೆ 4.30ಕ್ಕೆ ಮನೆ ಹಿತ್ತಿಲಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಎಂಟು ತಿಂಗಳಿಂದ ಬ್ರಿಟನ್‌ನಲ್ಲಿ ದಾದಿಯಾಗಿ ಸೇವೆ ಸಲ್ಲಿಸುತ್ತಿದ್ದ ರಂಜಿತಾರಿಗೆ ಕೇರಳದಲ್ಲಿ ಸರಕಾರಿ ಉದ್ಯೋಗ ಲಭಿಸಿತ್ತು. ಜುಲೈಯಲ್ಲಿ ಸೇವೆಗೆ ಸೇರ್ಪಡೆಗೊಳ್ಳ ಲಿದ್ದರು. ಇದರಂತೆ ಲಂಡನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯಿಂದ ದಾಖಲೆ ಪತ್ರಗಳನ್ನು ತರಲೆಂದು ಅತ್ತ ತೆರಳುತ್ತಿದ್ದಾಗ ವಿಮಾನ ದುರಂತ ಸಂಭವಿಸಿತ್ತು.

You cannot copy contents of this page