ಕಾಸರಗೋಡು: ಬಂದಡ್ಕದಲ್ಲಿ ಅಬ ಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾ ಚರಣೆಯಲ್ಲಿ 10,125 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾ ಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸ ಲಾಗಿದೆ. ಅಡೂರು ಚಾಮೆಕೊಚ್ಚಿ ಮಾರಿ ಪಡ್ಪು ಹೌಸ್ನ ಅಬ್ದುಲ್ ರಹ್ಮಾನ್ (60), ಬಂದಡ್ಕದ ಪಿ.ಕೆ. ಅಶ್ರಫ್ (42) ಎಂಬಿವರನ್ನು ಬಂದಡ್ಕ ಅಬಕಾರಿ ಇನ್ಸ್ಪೆಕ್ಟರ್ ಎ.ಪಿ. ಶಹಬಾಸ್ ಅಹ ಮ್ಮದ್ ನೇತೃತ್ವದ ತಂಡ ಬಂಧಿಸಿದೆ.
ಕರ್ನಾಟಕದಿಂದ ಮಾದಕವಸ್ತು ಗಳನ್ನು ಸಾಗಾಟ ನಡೆಸಲಾಗುತ್ತಿದೆಯೆಂಬ ಗುಪ್ತ ಮಾಹಿತಿಯ ಆಧಾರದಲ್ಲಿ ನಿನ್ನೆ ರಾತ್ರಿ 10 ಗಂಟೆಗೆ ಕಣ್ಣಾಡಿತೋಡ್ ಎಂಬಲ್ಲಿ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ಆರಂಭಿಸಿದ್ದರು. ಈ ವೇಳೆ ತಲುಪಿದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ. ಬಳಿಕ ಉತ್ಪನ್ನಗಳು ಹಾಗೂ ಆರೋಪಿಗಳನ್ನು ಬೇಡಗಂ ಪೊಲೀಸರಿಗೆ ಹಸ್ತಾಂ ತರಿಸಲಾಯಿತು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.