ಪ್ರಗತಿಪರ ಕೃಷಿಕ ವಸಂತ ಭಂಡಾರಿ ನಿಧನ

ಮಂಜೇಶ್ವರ: ಬಾಕ್ರಬೈಲ್ ಕಯ್ಯ ನಿವಾಸಿ ಬಿಜೆಪಿ, ಆರ್.ಎಸ್.ಎಸ್ ನೇತಾರ, ಪ್ರಗತಿಪರ ಕೃಷಿಕ ವಸಂತ ಭಂಡಾರಿ ಕಯ್ಯ (78) ನಿಧನರಾದರು. ಇವರು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಮಾಜಿ ಅಧ್ಯಕ್ಷ, ಪಾತೂರು ಸೂರ್ಯೇಶ್ವರ ಕ್ಷೇತ್ರ ಟ್ರಸ್ಟಿಯÁಗಿದ್ದರು. ಭಜನೆಗಾ ರರಾಗಿದ್ದರು. ಮೃತರು ಪತ್ನಿ ಗುಲಾಬಿ, ಮಕ್ಕಳಾದ ಪ್ರವೀಣ ಕಯ್ಯ, ಪ್ರತಿಭಾ, ಪ್ರಮೀಳ, ಸೊಸೆ ಜಯಲಕ್ಷಿ÷್ಮÃ, ಅಳಿಯಂದಿರಾದ ರತ್ನಾಕರ ಆಳ್ವ, ರಾಜೇಶ್ ಆಳ್ವ, ಸಹೋದರರಾದ ಪುರಂದರ ಭಂಡಾರಿ, ಪುರುಷೋತ್ತಮ ಭಂಡಾರಿ, ಬಾಲಕೃಷ್ಣ ಭಂಡಾರಿ, ನಾಗೇಶ್ ಭಂಡಾರಿ, ಸಹೋದರಿಯ ರಾದ ಹರಿಣಾಕ್ಷಿ, ಸರಸ್ವತಿ, ಇಂದಿರಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ವಿನಿ, ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಉಳ್ಳಾಲ ಬಿಜೆಪಿ ಅಧ್ಯಕ್ಷ ಜಗದೀಶ್ ಕುವ್ವತಬೈಲ್, ಮುಖಂಡರಾದ ಯತಿರಾಜ್ ಶೆಟ್ಟಿ, ಆನಂದ, ಪದ್ಮನಾಭ ರೈ ಮೀಂಜ, ಭಾಸ್ಕರ ಪೊಯ್ಯೆ, ನಾಗೇಶ್ ಬಳ್ಳೂರ್, ಮೋಹನ್‌ದಾಸ್ ತಲಪಾಡಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

RELATED NEWS

You cannot copy contents of this page