ಶಿರಿಯದಲ್ಲಿ ವ್ಯಾಪಕ ಕಡಲ್ಕೊರೆತ: ಮೀನು ಕಾರ್ಮಿಕರ 2 ಮನೆ ಅಪಾಯದಂಚಿನಲ್ಲಿ

ಉಪ್ಪಳ: ಕಡಲ್ಕೊರೆತದಿಂದ ಮನೆಗಳು ಅಪಾಯದಂಚಿಗೆ ತಲುಪಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ 15ನೇ ವಾರ್ಡ್ ಶಿರಿಯ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಕಡಲ್ಕೊರೆತ ವ್ಯಾಪಕಗೊಂಡಿದೆ. ಇದರಿಂದ ಈ ಪ್ರದೇಶದ ಮೀನು ಕಾರ್ಮಿಕರಾದ ಅವ್ವಮ್ಮ, ಸುಮತಿ ಎಂಬವರ ಫಲಕೊಡುವ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು, ಮನೆಗಳು ಅಪಾಯದಂಚಿನಲ್ಲಿದೆ. ಈ ಪ್ರದೇಶದಲ್ಲಿ ನಿರ್ಮಿಸಲಾದ ಕಗ್ಗಲ್ಲಿನ ತಡೆಗೋಡೆ ಕುಸಿದು ಬಿದ್ದು ಸಮುದ್ರ ಪಾಲಾಗಿದೆ. ಇದೀಗ ಕುಟುಂಬ ಆತಂಕಗೊA ಡಿದೆ. ಸ್ಥಳಕ್ಕೆ ಶಿರಿಯ ವಿಲೇಜ್ ಕಚೇರಿ, ತಾಲೂಕು, ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

RELATED NEWS

You cannot copy contents of this page