ಕಾಸರಗೋಡು: ಕೇರಳ ಪ್ರಿಂಟರ್ಸ್ ಅಸೋಸಿಯೇಷನ್‌ನ ಕಾಸರಗೋಡು ಜಿಲ್ಲಾ ಸಮ್ಮೇಳನ ನಾಳೆ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿರುವ ಆರ್.ಕೆ. ಮಾಲ್‌ನಲ್ಲಿ ನಡೆಯಲಿದೆ ಎಂದು ಈ ಪ್ರಯುಕ್ತ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಮುಜೀಬ್ ಅಹಮ್ಮದ್, ಟಿ.ಪಿ. ಅಶೋಕ್ ಕುಮಾರ್, ಮೊ ದೀನ್, ಎ.ಬಿ. ಅಜಯ್ ಕುಮಾರ್, ಸುಧೀಶ್ ಸಿ. ಜಿತು ಪನಯಾಲ್ ಮತ್ತು ಶಶಿ ತೋಟತ್ತಿಲ್ ತಿಳಿಸಿದ್ದಾರೆ.
ಜೂನ್ ೨೯ರಂದು ಬೆಳಿಗ್ಗೆ ೯.೩೦ಕ್ಕೆ ಸ್ವಾಗತ ಸಂಘದ ಸಂಚಾಲಕ ಸಿ.ಬಿ. ಕೊಡಿಯಂ ಕುನ್ನೇಲ್ ಧ್ವಜಾರೋಹಣಗೈಯ್ಯುವ ಮೂಲಕ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ನಂತರ ಸಂಘಟನೆಯ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಟಿ.ಪಿ. ಅಧ್ಯಕ್ಷತೆಯಲ್ಲಿ ಆರಂಭಗೊಳ್ಳುವ ಸಮ್ಮೇಳನವನ್ನು ಸಂಘಟನೆಯ ರಾಜ್ಯ ಅಧ್ಯಕ್ಷ ವೈ. ವಿಜಯನ್ ಉದ್ಘಾಟಿಸುವರು. ಜಿಲ್ಲಾ ಕಾರ್ಯದರ್ಶಿ ರೆಜಿ ಮ್ಯಾಥ್ಯು ವರದಿ ಮಂಡಿಸುವರು. ಜಿಲ್ಲಾ ಕೋಶಾಧಿಕಾರಿ ಮೊದೀನ್ ಆಯ-ವ್ಯಯ ಲೆಕ್ಕಾಚಾರ ಮಂಡಿಸುವರು. ಸಂಘಟನೆಯ ಜಿಲ್ಲಾ ವೀಕ್ಷಕ ಟಿ. ಉಮ್ಮರ್ ಸೇರಿದಂತೆ ಹಲವರು ಶುಭಾಶಂಸನೆಗೈದು ಮಾತನಾಡುವರು.
ಸ್ವಾಗತ ಸಂಘದ ಅಧ್ಯಕ್ಷ ಮುಜೀಬ್ ಅಹಮ್ಮದ್ ಸ್ವಾಗತಿಸುವರು. ಜಿಲ್ಲಾ ಜತೆ ಕಾರ್ಯದರ್ಶಿ ಶಂಶೀರ್ ಕಾಞಂಗಾಡ್ ವಂದಿಸುವರು.
ಕೇರಳ ಪ್ರಿಂಟರ್ಸ್ ಅಸೋಸಿಯೇಷನ್‌ಗೆ ರೂಪು ನೀಡಿ ಇಂದಿಗೆ ೪೦ ವರ್ಷ ಸಂದಿದೆ. ಇದನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಅದರ ಪೂರ್ವಭಾವಿಯಾಗಿ ಈ ಜಿಲ್ಲಾ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಪದಾಧಿಕಾರಗಳು ತಿಳಿಸಿದ್ದಾರೆ.